ತರಬೇತಿ ಪೂರ್ಣಗೊಳಿಸಿರುವ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಆರು ಸೂಪರ್ ಪರಿಣಾಮಕಾರಿ ಮತ್ತು ಅಸಾಧಾರಣ ಬುದ್ಧಿವಂತ ಶ್ವಾನಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಪಡೆಗಳಲ್ಲಿ ಒಂದಾದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ( ಸಿಐಎಸ್ ಎಫ್ ) ಸೇರಲು ಸಜ್ಜಾಗಿವೆ.ದೇಶದಲ್ಲಿ ಈ ತಳಿಯ ಶ್ವಾನಗಳನ್ನು ಭದ್ರತೆಗಾಗಿ ಆಯೋಜಿಸಿರುವ ಮೊದಲ ವಿಮಾನ ನಿಲ್ದಾಣ ಬೆಂಗಳೂರು ಆಗಲಿದೆ.
ಸಿಐಎಸ್ ಎಫ್ ಮೂಲಗಳ ಪ್ರಕಾರ, ಐದು ಹೆಣ್ಣು ಶ್ವಾನಗಳಾಗಿದ್ದು, ಅವುಗಳಿಗೆ ವಿಶೇಷವಾಗಿ ಸ್ಫೋಟಕ ನಾಶ ಕುರಿತಂತೆ ತರಬೇತಿ ನೀಡಲಾಗಿದೆ. ಅವುಗಳನ್ನು ಏರ್ ಪೋರ್ಟ್ ಸೆಕ್ಯೂರಿಟಿ ಗ್ರೂಪ್ ಯೂನಿಟ್ ಸಿಐಎಸ್ ಎಫ್ ತನ್ನ ಕೆ-9 ಶ್ವಾನಪಡೆಯಲ್ಲಿ ಸೇರ್ಪಡೆ ಮಾಡುತ್ತಿದೆ. ಆರು ಮಾಲಿನೋಯಿಸ್ ಸೇರ್ಪಡೆಯೊಂದಿಗೆ ನಮ್ಮ 15 ಪ್ರಬಲ ಶ್ವಾನ ಪಡೆಗಳಲ್ಲಿ ಏಳು ಬೆಲ್ಜಿಯನ್ ತಳಿಯ ಶ್ವಾನಗಳಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.