ಶಾಕಿಂಗ್! ಬೀದಿನಾಯಿಗಳಿಗೆ ಊಟ ಹಾಕುವ ಮುನ್ನ ಹುಷಾರ್!

ಶನಿವಾರ, 18 ಡಿಸೆಂಬರ್ 2021 (09:39 IST)
ಮುಂಬೈ : ಬೀದಿ ನಾಯಿಗಳಿಗೆ ಆಹಾರ ನೀಡಿದ್ದಕ್ಕೆ ಮಹಿಳೆಗೆ 8 ಲಕ್ಷ ರೂ. ದಂಡ ಹಾಕಿರುವ ವಿಚಿತ್ರ ಘಟನೆ ಮುಂಬೈನಲ್ಲಿ ನಡೆದಿದೆ.

ಬೀದಿನಾಯಿಗಳಿಗೆ ಹೌಸಿಂಗ್ ಕಾಲೋನಿ ಆವರಣದಲ್ಲಿ ಆಹಾರ ನೀಡಿದ್ಧಕ್ಕೆ ಮುಂಬೈ ಮಹಿಳೆಗೆ 8 ಲಕ್ಷ ರೂಪಾಯಿ ದಂಡವನ್ನು ಅಪಾರ್ಟ್ಮೆಂಟ್ ನಿವಾಸಿಗಳ ಸಂಘ ವಿಧಿಸಿದೆ. 40ಕ್ಕೂ ಹೆಚ್ಚು ಕಟ್ಟಡಗಳಿರುವ ಓಖI ಅಪಾರ್ಟ್ಮೆಂಟ್ ಇದಾಗಿದೆ.

ಇಲ್ಲಿ ವಾಸಿಸುವ ಆಂಶು ಸಿಂಗ್, ಕಾಲೋನಿ ಆವರಣದಲ್ಲಿ ಬೀದಿನಾಯಿಗಳು ಆಶ್ರಯ ಸಿದ್ದವು.ಈ  ಶ್ವಾನಗಳಿಗೆ ಆಹಾರ ನೀಡಿ ಭಾರಿ ಮೊತ್ತದ ದಂಡವನ್ನು ಕಟ್ಟಿದ್ದಾರೆ.

ಜುಲೈ 2021ರಿಂದ ಬೀದಿನಾಯಿಗಳಿಗೆ ಆಹಾರ ಒದಗಿಸುತ್ತಿದ್ದೆ. ಈ ಕಾರಣಕ್ಕಾಗಿ ನನಗೆ ಪ್ರತಿ ದಿನಕ್ಕೆ 5000ರೂಪಾಯಿಗಳಂತೆ ಈ ವರೆಗೆ ಒಟ್ಟು 8 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇನ್ನೊಬ್ಬ ನಿವಾಸಿಗೆ ಆರು ಲಕ್ಷ ದಂಡ ವಿಧಿಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಬೀದಿನಾಯಿಗಳಿಂದ ಎಲ್ಲರಿಗೂ ತೊಂದರೆಯಾಗುತ್ತಿರುವ ಕಾರಣ ದಂಡ ವಿಧಿಸಲಾಗಿದೆ ಎಂದು ಸಂಘ ಸಮರ್ಥಿಸಿಕೊಂಡಿದೆ. 

ನಿವಾಸಿ ಲೀಲಾ ವರ್ಮಾ ಖಾಸಗಿವಾಹಿನಿಯವರೊಂದಿಗೆ ಮಾತನಾಡಿ, ನಾಯಿಗಳಿಗೆ ಆಹಾರ ನೀಡುತ್ತಿರುವ ಸದಸ್ಯರನ್ನು ಸೊಸೈಟಿ ಕಾವಲುಗಾರರು ಹಿಂಬಾಲಿಸಿ ಅವರ ಹೆಸರನ್ನು ನಮೂದಿಸುತ್ತಾರೆ. ನಂತರ ಅದನ್ನು ವ್ಯವಸ್ಥಾಪಕ ಸಮಿತಿಗೆ ವರದಿ ಮಾಡಲಾಗುತ್ತದೆ, ನಂತರ ದಂಡವನ್ನು ಲೆಕ್ಕಾಚಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ