ವಾಕಿಂಗ್ ಹೊರಟವರ ಮೇಲೆ ಹರಿದ ಕಾರು: ಸಾವು, ಗಾಯ

ಸೋಮವಾರ, 24 ಡಿಸೆಂಬರ್ 2018 (17:22 IST)
ಬೆಳ್ಳಂಬೆಳಗ್ಗೆ ವಾಕಿಂಗ್ ಗೆ ಎಂದು ಹೊರಟವರಲ್ಲಿ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಕಲಬುರಗಿ ನಗರದ ರಾಮ ಮಂದಿರ ರಿಂಗ್ ರೋಡ್ ಸಮೀಪ ಇಂದು ಬೆಳಗ್ಗೆ ವಾಕಿಂಗ್ ಹೊರಟವರ ಮೇಲೆ ಕಾರು ಹರಿದಿದೆ. ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತನ ಹೆಸರು ಪತ್ತೆಯಾಗಿಲ್ಲ. ಭಾಲ್ಕಿಯಿಂದ ಕೂಡಲ ಸಂಗಮಕ್ಕೆ ಹೊರಟಿದ್ದ ಕಾರಿನ ಚಾಲಕನಿಗೆ ಫಿಡ್ಸ್ ಬಂದಿದೆ. ಹೀಗಾಗಿ ನಿಯಂತ್ರಣ ತಪ್ಪಿದ ಕಾರಣದಿಂದ ಕಾರು ವ್ಯಕ್ತಿಯ ಮೇಲೆ ಹರಿದಿದೆ ಎನ್ನಲಾಗಿದೆ. ಕಾರನ್ನು ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ