ಸಂಪ್ರದಾಯದ ಹೆಸರಿನಲ್ಲಿ ಕಾಡುಪ್ರಾಣಿಗೆ ಚಿತ್ರಹಿಂಸೆ; ಮೈಸೂರಿನ ಹೆಬ್ಬಲಗುಪ್ಪೆ ಗ್ರಾಮದಲ್ಲಿ ವಿಚಿತ್ರ ಆಚರಣೆ
ಶುಕ್ರವಾರ, 31 ಜನವರಿ 2020 (11:09 IST)
ಮೈಸೂರು : ಸಂಪ್ರದಾಯದ ಹೆಸರಿನಲ್ಲಿ ನರಿಯನ್ನು ಕಟ್ಟಿ ನಾಯಿಯಿಂದ ಕಚ್ಚಿಸಿ ಚಿತ್ರ ಹಿಂಸೆ ನೀಡುವ ವಿಚಿತ್ರ ಆಚರಣೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದಲ್ಲಿ ನಡೆದಿದೆ.
ಹೆಬ್ಬಲಗುಪ್ಪೆ ಗ್ರಾಮದಲ್ಲಿ ದೇವರ ಹೆಸರಿನಲ್ಲಿ ಕಾಡುಪ್ರಾಣಿಗೆ ಚಿತ್ರಿಂಸೆ ನೀಡಲಾಗುತ್ತಿದ್ದು, ಇದು ಹಿಂದಿನ ಕಾಲದಿಂದಲೂ ಜಾರಿಯಲ್ಲಿರುವುದಾಗಿ ತಿಳಿದುಬಂದಿದೆ.
ಜ.16 ರ ಹುಲಿಕುರ ವೇಣುಗೋಪಾಲಸ್ವಾಮಿ ಜಾತ್ರಾ ಮಹೋತ್ಸವದಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನರಿ-ನಾಯಿಗಳ ಕಾಳಗದಿಂದ ಒಳಿತಾಗುತ್ತೆನ್ನುವ ನಂಬಿಕೆಯಿಂದ ಜನರು ಈ ರೀತಿ ಮಾಡುತ್ತಿದ್ದಾರೆ ಎನ್ನಲಾಗಿದೆ.