ಟವರ್ ಏರಿ ಬಿರಿಯಾನಿ, ಸಿಗರೇಟ್ಗೆ ಡಿಮ್ಯಾಂಡ್ ?
ಈ ರೀತಿ ಟವರ್ ಏರಿ ಕುಳಿತ ವ್ಯಕ್ತಿ ಧಾರವಾಡ ಮೂಲದ ಜಾವೇದ್ ಎಂದು ಗೊತ್ತಾಗಿದೆ. ಧಾರವಾಡದ ಜ್ಯುಬಿಲಿ ಸರ್ಕಲ್ ಬಳಿ ಇರುವ ಮೊಬೈಲ್ ಟವರ್ನ್ನು ಈತ ಏರಿ ಕುಳಿತಿದ್ದ.
ಈತ ಪಿಕ್ ಪಾಕೆಟರ್ ಎಂದು ಗೊತ್ತಾಗಿದ್ದು, ಹಲವು ಕಡೆ ಪಿಕ್ ಪಾಕೆಟ್ ಮಾಡಿದ್ದ. ಅಲ್ಲದೇ ಈತನ ಮೇಲೆ ಅರೆಸ್ಟ್ ವಾರೆಂಟ್ ಸಹ ಇದೆ. ಜಿಲ್ಲಾ ನ್ಯಾಯಾಧೀಶರು ಸ್ಥಳಕ್ಕೆ ಬರುವವರೆಗೂ ನಾನು ಟವರ್ ಬಿಟ್ಟು ಇಳಿದು ಬರುವುದಿಲ್ಲ ಎಂದು ಪಟ್ಟು ಹಿಡಿದು ಅಲ್ಲೇ ಕುಳಿತಿದ್ದ.
ಆತನ ರಕ್ಷಣೆಗೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರೂ ಮುಂದಾಗಿದ್ದರು. ರಕ್ಷಣಾ ತಂಡದ ಇಬ್ಬರು ಸಿಬ್ಬಂದಿ ಟವರ್ ಏರಿ ಆತನಿಗೆ ನೀರು ಹಾಗೂ ಬಿರಿಯಾನಿ ಕೊಟ್ಟು ಕೆಳಗಿಳಿಯುವಂತೆ ಸೂಚನೆ ನೀಡಿದ್ದರು.