2017ರಲ್ಲಿ ಶೇ.71ರಷ್ಟಿದ್ದ ವಾಹನ ದಟ್ಟಣೆ ಈ ವರ್ಷ ಶೇ.48ಕ್ಕೆ ಇಳಿದಿದೆ ಅಂದರೆ ಶೇ.32ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಿದೆ. ಇನ್ನು ಮುಂಬೈ ನಲ್ಲಿ ಶೇ.18ರಷ್ಟು, ದೆಹಲಿಯಲ್ಲಿ ಶೇ.14ರಷ್ಟು, ಪುಣೆಯಲ್ಲಿ ಶೇ.29ರಷ್ಟು ವಾಹನ ದಟ್ಟಣೆ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.
ಎಲೆಕ್ಟ್ರಿಕ್ ಬೈಕ್ ಬಳಕೆ ಹೆಚ್ಚು: ಎಷ್ಟೇ ವಾಹನ ದಟ್ಟಣೆ ಕಡಿಮೆಯಾದರೂ ಜನರು ತಮ್ಮ ಖಾಸಗಿ ವಾಹನ ಖರೀದಿಯನ್ನು ಹೆಚ್ಚಿಸಿದ್ದಾರೆ. ಅದರಲ್ಲೂ ಈ ಬಾರಿ ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗಿದ್ದಾರೆ. 2021ರಲ್ಲಿ ಬರೋಬ್ಬರಿ 22,264 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದ್ದು, 2018ರಲ್ಲಿ ಈ ಪ್ರಮಾಣ ಕೇವಲ 3,806 ಇತ್ತು.