ಬೆಂಗಳೂರಿಗೆ ವಿ.ಐ.ಪಿ.ಗಳ ಎಂಟ್ರಿ ಮಾರ್ಗ ಬದಲಾವಣೆ ಮಾಡಿದ ಟ್ರಾಫಿಕ್ ಪೋಲಿಸರು

ಸೋಮವಾರ, 26 ಸೆಪ್ಟಂಬರ್ 2022 (14:56 IST)
ಬೆಂಗಳೂರು ನಗರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರ ಮತ್ತು ಸುರಕ್ಷತೆ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಸಂಚಾರ ಮಾರ್ಗ ಬದಲಾಯಿಸಲಾಗಿದೆ.
 
ಕಬ್ಬನ್ ಪಾರ್ಕ್ ಮತ್ತು ಅಶೋಕನಗರ ಸಂಚಾರ ಠಾಣೆ ವ್ಯಾಪ್ತಿಯ ಕೆಲ ಏಕಮುಖ ಸಂಚಾರ ರಸ್ತೆಗಳನ್ನು ತಾತ್ಕಾಲಿಕವಾಗಿ ದ್ವಿಮುಖ ಸಂಚಾರ ರಸ್ತೆಗಳಾಗಿ ಮಾರ್ಪಡಿಸಲಾಗಿದೆ.
ಕಬ್ಬನ್‌ಪಾರ್ಕ್ ಸಂಚಾರ ಠಾಣೆ ವ್ಯಾಪ್ತಿಯ ರಾಜಭವನ ರಸ್ತೆಯನ್ನು ರಾಜಭವನ ಮುಖ್ಯದ್ವಾರದಿಂದ ಪೊಲೀಸ್ ತಿಮ್ಮಯ್ಯ ವೃತ್ತದ ವರೆಗೆ ತಾತ್ಕಾಲಿಕವಾಗಿ ದ್ವಿಮುಖ ಸಂಚಾರ ರಸ್ತೆಯನ್ನಾಗಿ ಮಾರ್ಪಡಿಸಿ ಗಣ್ಯ ವ್ಯಕ್ತಿಗಳ ಕಾನ್ವಾಯ್ ಸಂಚರಿಸುವ ಸಮಯದಲ್ಲಿ ಮಾತ್ರ ಅನುವು ಮಾಡಿಕೊಡಲಾಗಿದೆ. ವಿಧಾನಸೌಧದ ನಿರ್ಗಮನ ದ್ವಾರ(ಗೇಟ್ ಸಂಖ್ಯೆ 4)ದಲ್ಲಿ ಕಾನ್ವಾಯ್ ಸಂಚರಿಸುವ ಸಮಯದಲ್ಲಿ ಮುಕ್ತ ಪ್ರವೇಶಕ್ಕೆ ಅನುವು ಮಾಡಲಾಗಿದೆ.
 
ಅಶೋಕನಗರ ಸಂಚಾರ ಠಾಣಾ ವ್ಯಾಪ್ತಿಯ ರಿಚ್ಮಂಡ್ ವೃತ್ತದಿಂದ ಬಾಲ್ಡ್‌ವಿನ್ ಬಾಲಕಿಯರ ಶಾಲೆಯ ವೃತ್ತದವರೆಗೆ ತಾತ್ಕಾಲಿಕವಾಗಿ ದ್ವಿಮುಖ ಸಂಚಾರ ರಸ್ತೆಯನ್ನಾಗಿ ಮಾರ್ಪಡಿಸಲಾಗಿದೆ. ಸೆ.26ರ ಸಂಜೆ 5.30ರಿಂದ 6 ಗಂಟೆವರೆಗೆ ಹಳೇ ವಿಮಾನ ನಿಲ್ದಾಣ ರಸ್ತೆ- ಎಂ.ಜಿ.ರಸ್ತೆ- ಡಿಕನ್ಸನ್ ರಸ್ತೆ- ಕೆ.ಆರ್.ರಸ್ತೆ ಮತ್ತು ಕಬ್ಬನ್ ರಸ್ತೆ- ರಾಜಭವನ ರಸ್ತೆ ಬಳಸದೆ ಪರ್ಯಾಯ ರಸ್ತೆಗಳಲ್ಲಿ ಸಂಚರಿಸಬೇಕು.
 
ಸೆ.27ರ ಬೆಳಗ್ಗೆ 9.30ರಿಂದ 11.30ರಲ್ಲಿ ರಾಜಭವನ ರಸ್ತೆ- ಇನ್ಫೆಂಟ್ರಿ ರಸ್ತೆ, ಕೆ.ಆರ್.ರಸ್ತೆ- ಕಬ್ಬನ್ ರಸ್ತೆ- ಡಿಕನ್ಸನ್ ರಸ್ತೆ-ಎಂ.ಜಿ.ರಸ್ತೆ- ಹಳೇ ವಿಮಾನ ನಿಲ್ದಾಣ ರಸ್ತೆ- ಸುರಂಜನ್‌ದಾಸ್ ರಸ್ತೆ. ಮಧ್ಯಾಹ್ನ 3.40ರಿಂದ ರಾತ್ರಿ 8 ಗಂಟೆ ವರೆಗೆ ರಾಜಭವನ ರಸ್ತೆ- ಇನ್ಫೆಂಟ್ರಿ ರಸ್ತೆ- ಕ್ವೀನ್ಸ್ ರಸ್ತೆ- ಕಸ್ತೂರಿ ಬಾ ರಸ್ತೆ- ರಿಚ್ಮಂಡ್ ರಸ್ತೆ- ಲ್ಯಾಂಗ್ ಫೋರ್ಡ್ ರಸ್ತೆ- ಅಂಬೇಡ್ಕರ್ ರಸ್ತೆ.
 
ಸೆ.28ರ ಬೆಳಗ್ಗೆ 9 ಗಂಟೆಯಿಂದ 9.30ರವರೆಗೆ ರಾಜಭವನ ರಸ್ತೆ- ಇನ್ಫೆಂಟ್ರಿ ರಸ್ತೆ- ಕೆ.ಆರ್.ರಸ್ತೆ- ಕಬ್ಬನ್ ರಸ್ತೆ- ಡಿಕನ್ಸನ್ ರಸ್ತೆ- ಎಂ.ಜಿ.ರಸ್ತೆ- ಹಳೇ ವಿಮಾನ ನಿಲ್ದಾಣ ರಸ್ತೆಗಳಲ್ಲಿ ಸಂಚರಿಸುವ ಬದಲು ಪರ್ಯಾಯ ರಸ್ತೆಗಳಲ್ಲಿ ಸಂಚರಿಸುವಂತೆ ನಗರ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ