ಮತ್ತೆ ಮುಷ್ಕರಕ್ಕೆ ಸಜ್ಜಾದ ಸಾರಿಗೆ ನೌಕರರು..!

ಶನಿವಾರ, 17 ಡಿಸೆಂಬರ್ 2022 (15:07 IST)
ರಾಜ್ಯದಲ್ಲಿ ಸಾರಿಗೆ ಮುಷ್ಕರ ನಡೆಸಲು ನೌಕರರು ಸಜ್ಜಾಗಿದ್ದಾರೆ.ಇಂದು  ಸಾರಿಗೆ ಮುಖಂಡರ ಮಹತ್ವದ ಸಭೆ ನಡೆಯಲಿದೆ.ಜನವರಿ ಅಥವಾ ಫೆಬ್ರವರಿಯಲ್ಲಿ ಮುಷ್ಕರ ಫಿಕ್ಸ್ ಅಂತಿರೋ ಮುಖಂಡರು.ಹೀಗಾಗಿ ಮಹತ್ವದ ಸಭೆಗೆ  ಮಾಜಿ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್, ಸಾರಿಗೆ ಮುಖಂಡ ಅನಂತ್ ಸುಬ್ಬರಾವ್.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷ ಬಾಸ್ಕರ್ ರಾವ್,ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ 
ಅನಂತ್ ಸುಬ್ಬರಾವ್ ರವರನ್ನ ಕರೆದಿದ್ದಾರೆ.ಕಳೆದೆರೆಡು ಬಾರಿ ಮುಷ್ಕರ ಮಾಡಿದ್ರು ಬೇಡಿಕೆ ಈಡೇರಿಸದ ರಾಜ್ಯ ಸರ್ಕಾರದ ವಿರುದ್ದ ಸಾರಿಗೆ ನೌಕರರು ಮುಷ್ಕರ ಮಾಡಲು ನಿರ್ಧಾರಿಸಿದ್ದಾರೆ
 
ಮೊದಲ ಮುಷ್ಕರ 2020 ಡಿಸೆಂಬರ್ 11 ರಿಂದ 14 ರ ವರೆಗೆ ( ನಾಲ್ಕು ದಿನ)ನಡೆದಿತ್ತು.ಎರಡನೇ ಮುಷ್ಕರ 2021 ಏಪ್ರಿಲ್ 7 ರಿಂದ 21 ರ ವರೆಗೆ ( 15 ದಿನಗಳ ಕಾಲ )ನಡೆದಿತ್ತು.ಹತ್ತು ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಮುಷ್ಕರ ಮಾಡಿದ್ದ ಸಾರಿಗೆ ನೌಕರರು ಆದರೆ ಒಂಬತ್ತು ಬೇಡಿಕೆಗಳನ್ನು ಈಡೇರಿಸ್ತಿವಿ ಎಂದು ರಾಜ್ಯ ಸರ್ಕಾರ ಮಾತು ಕೊಟ್ಟಿತ್ತು.ಆದರೆ ಇಲ್ಲಿಯವರೆಗೆ ಒಂದೇ ಒಂದು ಬೇಡಿಕೆಯನ್ನು ಈಡೇರಿಸದ ರಾಜ್ಯ ಸರ್ಕಾರ.ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮತ್ತೆ ಮುಷ್ಕರಕ್ಕೆ ಸಾರಿಗೆ ನೌಕರರ ಸಿದ್ದತೆ ಮಾಡಿಕೊಂಡಿದ್ದು,ಇಂದಿನ ಸಭೆಯಲ್ಲಿ ಮುಷ್ಕರದ ದಿನಾಂಕ ಫಿಕ್ಸ್ ಸಾಧ್ಯತೆ ಇದೆ.ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ, ಕಲ್ಯಾಣ ಕರ್ನಾಟಕ ಸಾರಿಗೆ ಸೇರಿ ಒಂದು ಲಕ್ಷದ ಮೂವರು ಸಾವಿರ ನೌಕರರಿದ್ದಾರೆ.ರಾಜ್ಯದ ಹತ್ತೂ ಸಂಘಟನೆಗಳ ಮುಖಂಡರ ಸಭೆ ಕರೆಯಲಾಗಿದೆ.ಬಸವನಗುಡಿಯ ಡಿವಿಜಿ ರೋಡ್ ನ ಭಾಸ್ಕರ್ ರಾವ್ ಕಚೇರಿಯಲ್ಲಿ ನಡೆಯಲಿರುವ ಸಭೆ ನಡೆಯಲಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ