ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾಲೇಜು ಬಂದ್ ಗೆ ಕರೆ

ಶನಿವಾರ, 17 ಡಿಸೆಂಬರ್ 2022 (14:37 IST)
ರಾಜ್ಯದ ವಿ.ವಿಗಳ ಪರೀಕ್ಷಾ ಫಲಿತಾಂಶ ವಿಳಂಬ, ಶುಲ್ಕ ಏರಿಕೆ ಹಿನ್ನೆಲೆ ವಿದ್ಯಾರ್ಥಿ ವೇತನ,   ಉಚಿತ ಬಸ್ ಪಾಸ್ ಸೌಲಭ್ಯಗಳನ್ನು ಪರಿಶಿಷ್ಟರಿಗೆ ಸೀಮಿತಗೊಳಿಸಿದ್ದಕ್ಕೆ ಎನ್ ಎಸ್ ಯು ಐ ವಿರೋಧ ವ್ಯಕ್ತಪಡಿಸಿದ್ದು,ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಡಿ. 17ರಂದು ರಾಜ್ಯಮಟ್ಟದಲ್ಲಿ ಕಾಲೇಜ್ ಬಂದ್ ಗೆ ಕರೆ ಕೊಡಲಾಗಿತ್ತು.ವಿದ್ಯಾರ್ಥಿಗಳ ಆಕ್ರೋಶವನ್ನು  ಸರ್ಕಾರಕ್ಕೆ ತಿಳಿಸಲು ರಾಜ್ಯ ಮಟ್ಟದ ಕಾಲೇಜು ಬಂದ್ ಗೆ ಕರೆ ಕೊಡಲಾಗಿತ್ತು.ಹೀಗಾಗಿ ಇಂದು ರಾಜ್ಯದ ಸರಕಾರಿ, ಅನುದಾನಿತ ಹಾಗೂ ಸಂಯೋಜಿತ ಕಾಲೇಜ್ ಬಂದ್ ಗೆ ಕರೆಗೆ ಪ್ರತಿಭಟನೆ ಆರಂಭವಾಗಿದೆ.
 
ಇಂದು ರಾಜ್ಯಾದ್ಯಂತ ಕಾಲೇಜ್ ಬಂದ್ ಗೆ  ವಿದ್ಯಾರ್ಥಿ ಸಂಘಟನೆ ಕರೆಕೊಟ್ಟಿದ್ದು,ಶೇಷಾದ್ರಿ ಪುರಂ ನಲ್ಲಿ ಬಂದ್ ಗೆ ರೆಸ್ಪಾನ್ಸ್ ಇಲ್ಲದೆ ಎಂದಿನಂತೆ ಕಾಲೇಜಿಗೆ ವಿದ್ಯಾರ್ಥಿಗಳು ಹೋಗಿದ್ದಾರೆ.ರಾಜ್ಯಾದ್ಯಂತ ಬೀದಿಗಿಳಿಯಲು ವಿದ್ಯಾರ್ಥಿಗಳು ಸಜ್ಜಾಗಿದ್ದು,ಎಲೆಕ್ಷನ್ ,ಹತ್ತಿರ ಬರ್ತಿದಂತೆ ವಿದ್ಯಾರ್ಥಿಗಳು  ಪ್ರತಿಭಟನೆಗೆ ಇಳಿದಿದ್ದಾರೆ.
 
ವಿದ್ಯಾರ್ಥಿಗಳು ಸರಕಾರಿ ಕಾಲೇಜುಗಳಲ್ಲಿ ಎನ್ ಇಪಿ ನಂತರ ಶುಲ್ಕ ಮೂರು ಪಟ್ಟು ಹೆಚ್ಚಾಗಿದೆ.ಖಾಸಗಿ ಕಾಲೇಜುಗಳು ಶುಲ್ಕ ಏರಿಸಲು ರೇಸ್ ಗೆ ಇಳಿದಿವೆ.ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳು ಸರಿಯಾದ ಸಮಯಕ್ಕೆ ಫಲಿತಾಂಶ ನೀಡಬೇಕು.ಕೇವಲ ಪರಿಶಿಷ್ಟರಿಗೆ ನೀಡುತ್ತಿರುವ ಉಚಿತ ಬಸ್ ಪಾಸ್ ಸೌಲಭ್ಯವನ್ನು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ನೀಡಬೇಕು.ಕೊರೊನಾ ಸಂದರ್ಭ ಹಾಗೂ ಕೊರೊನಾ ನಂತರ 1ಲಕ್ಷ  ವಿದ್ಯಾರ್ಥಿಗಳು ಸ್ಕಾಲರಶಿಪ್ ನಿಂದ ವಂಚಿತರಾಗಿದ್ದಾರೆ.ಈ ಎಲ್ಲ ಬೇಡಿಕೆಗಳನ್ನ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಯದಿದ್ದರೆ  ಇನ್ನಷ್ಟು ಉಗ್ರ ಹೋರಾಟ ಮಾಡುವುದಾಗಿ ಎನ್ ಎಸ್ ಯು ಐ ಸಂಘಟನೆ ಎಚ್ಚರಿಕೆ ಕೊಟ್ಟಿದೆ.
 

ವೆಬ್ದುನಿಯಾವನ್ನು ಓದಿ