ತಡರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಅಪಘಾತ ನಡೆದಿದೆ.ಸುಧಾಕರ್, ಮತ್ತು ಗಣಿ ಮೃತರಾಗಿದ್ದು,ಸುಧಾಕರ್ ಬಿ ಎಸ್ ಎಫ್ ಉದ್ಯೋಗಿ.ಗಣಿ ಯೂಟ್ಯೂಬರ್ ಆಗಿದ್ದ.ಕೆಲಸ ಮುಗಿಸಿ ಬಿ ಎಸ್ ಎಫ್ ಕಾಂಪೌಂಡ್ ನಿಂದ ಸುಧಾಕರ್ ಹೊರಗೆ ಬರ್ತಿದ್ದ .ಈ ವೇಳೆ ವೇಗವಾಗಿ ಬಂದು ತನ್ನ ರಾಯಲ್ ಎನ್ಫೀಲ್ಡ್ ಇಂಟ್ರಾಸೆಪ್ಟರ್ ಬೈಕ್ ನಲ್ಲಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ಪರಿಣಾಮ ಸುಧಾಕರ ಸ್ಥಳದಲ್ಲಿ ಸಾವನಾಪ್ಪಿದ್ದಾನೆ.ಗಾಯಾಳು ಗಣಿಯನ್ನ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದ ಗಣಿ ಕೂಡ ಸಾವನಾಪ್ಪಿದ್ದು,ಘಟನೆ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿದೆ.