ನೊಂದ ಪ್ರೇಮಿಗಳಿಬ್ಬರು ಆತ್ಮಹತ್ಯೆ! ಮುಂದೇನಾಯ್ತು

ಶುಕ್ರವಾರ, 3 ಡಿಸೆಂಬರ್ 2021 (08:52 IST)
ಮಂಡ್ಯ : ಕೆಆರ್‌ಎಸ್ ಹಿನ್ನೀರಿಗೆ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಬಳಿ ನಡೆದಿದೆ.
ಮೈಸೂರಿನ ಮೇಟಗಳ್ಳಿಯ ನವೀನ್, ನಿಸರ್ಗ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.
ಸಂಬಂಧಿರಾಗಿದ್ದ ನವೀನ್ ಮತ್ತು ನಿಸರ್ಗ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ನವೆಂಬರ್ 20ರಂದು ನಿಸರ್ಗಳಿಗೆ ಬಲವಂತವಾಗಿ ಬೇರೆ ಯುವಕನ ಜೊತೆ ಮದುವೆ ಮಾಡಲಾಗಿತ್ತು. ಹೀಗಾಗಿ ಮನ ನೊಂದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿ ಡಿಸೆಂಬರ್ 1ರಂದು ನವೀನ್ ಮತ್ತು ನಿಸರ್ಗ ಇಬ್ಬರೂ ಮನೆಯಿಂದ ನಾಪತ್ತೆಯಾಗಿದ್ದಾರೆ.
ಕುಟುಂಬಸ್ಥರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದು ಕೆಆರ್‌ಎಸ್ ನಾರ್ತ್ ಬ್ಯಾಂಕ್ನ ಮಿಲ್ಟ್ರಿ ಕ್ಯಾಂಪ್ ಬಳಿ ಹಿನ್ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿ ಕೊಂಡಿರುವುದು ತಿಳಿದು ಬಂದಿದೆ. ಇಬ್ಬರೂ ವೇಲ್ನಿಂದ ಕಟ್ಟಿಕೊಂಡು ಹಿನ್ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ