ತಮಿಳುನಾಡು :ಇಂದು ಬೆಳಗ್ಗೆ ಕಾಡಿನತ್ತ ಹೋಗಿದ್ದ ದನಗಳನ್ನು ಅಟ್ಟಲು ಇಬ್ಬರೂ ಮಹಿಳೆಯರು ತೆರಳಿದ್ದರು. ಆ ವೇಳೆ ಒಂಟಿ ಸಲಗವೊಂದು ಕಾಡಿನಲ್ಲಿ ಪ್ರತ್ಯಕ್ಷವಾಗಿತ್ತು. ಭಯಭೀತರಾಗಿದ್ದ ಮಹಿಳೆಯರು ಓಡುವಾಗ ಅಟ್ಟಿಸಿಕೊಂಡು ಬಂದ ಆನೆ ಕಾಲ್ತುಳಿತದಿಂದಾಗಿ ಇಬ್ಬರೂ ಮಹಿಳೆಯರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾಡಾನೆ ದಾಳಿಗೆ ಇಬ್ಬರು ದನಗಾಹಿ ಮಹಿಳೆಯರು ದಾರುಣವಾಗಿ ಮೃತಪಟ್ಟಿರುವ ಘಟನೆ ಕರ್ನಾಟಕ -ತಮಿಳುನಾಡು ಗಡಿ ಪ್ರದೇಶವಾದ ತಳಿ ಅರಣ್ಯಪ್ರದೇಶದಲ್ಲಿ ಭಾನುವಾರ ಮುಂಜಾನೆ ನಡೆದಿದೆ. ವಸಂತಮ್ಮ (37) ಹಾಗೂ ಅನ್ನಿಯಾಳಮ್ಮ (45) ಮೃತ ದುರ್ದೈವಿಗಳು. ದಾಳಿಯಲ್ಲಿ ಎರಡು ಹಸುಗಳೂ ಸಹ ಮೃತಪಟ್ಟಿವೆ.
ನಿನ್ನೆಯಷ್ಟೇ ಒಂಟಿ ಸಲಗವೊಂದು ಡೆಂಕಣಿಕೋಟೆಯ ಬಳಿ ಸುಳಿದಾಡಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ಆ ಆನೆಯೇ ಇಂದು ಮಹಿಳೆಯರ ಮೇಲೆ ದಾಳಿ ನಡೆಸಿದೆ. ಇದಕ್ಕೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರವಣವೆಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.