ಉ-ಕ ಸ್ವಾಮೀಜಿಗಳ ಹೋರಾಟ: ಶ್ರೀಗಳು ಹೇಳಿದ್ದೇನು ಗೊತ್ತಾ?

ಮಂಗಳವಾರ, 31 ಜುಲೈ 2018 (17:58 IST)
ಉತ್ತಕ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿ ಪಡಿಸಿ, ಇಲ್ಲವೇ ಪ್ರತ್ಯೇಕ ರಾಜ್ಯದ ಕೂಗು ಜೋರಾಗುತ್ತದೆ ಎಂದು ಎಚ್ಚರಿಕೆಯಿಂದಲೇ ಬೆಳಗಾವಿಯಲ್ಲಿ ಮಠಾಧೀಶರು ಧರಣಿ ನಡೆಸಿದ್ರು.

ಬೆಳಗಾವಿ ಸುವರ್ಣ ವಿಧಾನಸೌಧ ಮುಂದೆ ಉತ್ತರ ಕರ್ನಾಟಕ ವಿಕಾಸ ವೇದಿಕೆ ನೇತೃತ್ವದಲ್ಲಿ ಶ್ರೀಗಳು ಹೋರಾಟಕ್ಕೆ ಧುಮುಕ್ಕುತ್ತಿದ್ದಂತೆ ವಿಪಕ್ಷ ನಾಯಕ ಬಿ.ಎಸ.ಯಡಿಯೂರಪ್ಪ ಮತ್ತು ಉತ್ತರ ಕರ್ನಾಟಕದ ಶಾಸಕರು ಹೋರಾಟಕ್ಕೆ ಬೆಂಬಲ ನೀಡಿದ್ರು. ಮಠಾಧೀಶರ ಧರಣಿಯಲ್ಲಿ ಪಾಲ್ಗೊಂಡ ಬಿಎಸವೈ ಸೇರಿದಂತೆ ಸರ್ಕಾರಕ್ಕೆ ಎಲ್ಲ ಶ್ರೀಗಳು ಮತ್ತು ಹೋರಾಟಗಾರರು ಸ್ಪಷ್ಟವಾದ ಬೇಡಿಕೆಯನ್ನ ಮುಂದಿಟ್ಟಿದ್ದಾರೆ. ಉತ್ತರ ಕರ್ನಾಟ ಅಭಿವೃದ್ಧಿ ಮಾಡದಿದ್ದರೆ ಪ್ರತ್ಯೇಕ ರಾಜ್ಯದ ಕೂಗು ಜೋರಾಗಲಿದೆ ಎಂದು ಹುಕ್ಕೇರಿ ಶ್ರೀಗಳು ಎಚ್ಚರಿಕೆ ನೀಡಿದ್ರೆ.

ಅತ್ತ ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಉತ್ತರ ಕರ್ನಾಟಕ  ಶಾಸಕರು ರಾಜೀನಾಮೆ ನೀಡಿ ಬಂದ್ರೆ ಸನ್ಮಾನ ಮಾಡೋಣಾ ಹೊರತು ಶಾಸಕರಾಗಿದ್ದಕ್ಕೆ ಸನ್ಮಾನ ಮಾಡುವುದು ಬೇಡ ಎಂದು ನಾಗನೂರು ಮಠದ  ಡಾ. ಸಿದ್ದರಾಮ ಸ್ವಾಮೀಜಿ ಶ್ರೀಗಳು ಕರೆ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ