ಗೂಂಡಾಗಳಿಗೆ ಕಾಂಗ್ರೆಸ್‌ನಿಂದ ಸಿಗುತ್ತಿರುವ ಕುಮ್ಮಕ್ಕಿನಿಂದ ಕಲ್ಲು ತೂರಾಟ ನಡೆದಿದೆ: ಪ್ರಮೋದ್ ಮುತಾಲಿಕ್

Sampriya

ಮಂಗಳವಾರ, 11 ಫೆಬ್ರವರಿ 2025 (18:51 IST)
Photo Courtesy X
ದಾವಣಗೆರೆ: ಅಲ್ಪಸಂಖ್ಯಾತ ಸಮುದಾಯದ ಗೂಂಡಾಗಳಿಗೆ ಕಾಂಗ್ರೆಸ್‌ನಿಂದ ಸಿಗುತ್ತಿರುವ ಕುಮ್ಮಕ್ಕಿನಿಂದ ಮೈಸೂರಿನ ಉದಯಗಿರಿ ಪೊಲೀಸ್‌ ಠಾಣೆಯ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಆರೋಪಿಸಿದರು.

ಉದಯಗಿರಿ ಪೊಲೀಸ್ ಠಾಣೆ ಮೇಲೆ ನಡೆದ ಕಲ್ಲು ತೂರಾಟ ಸಂಬಂಧ ಪ್ರತಿಕ್ರಿಯಿಸಿದ ಅವರು, ಅಲ್ಪಸಂಖ್ಯಾತರ ವೋಟ್‌ ಬ್ಯಾಂಕ್‌ ರಾಜಕಾರಣವನ್ನು ಕಾಂಗ್ರೆಸ್‌ ಲಜ್ಜೆಗೆಟ್ಟು ಮಾಡುತ್ತಿದೆ. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಗೂಂಡಾ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು  ಆಕ್ರೋಶ ಹೊರಹಾಕಿದರು.

ಮುಸ್ಲಿಂ ಗೂಂಡಾಗಿರಿಯ ಪ್ರವೃತ್ತಿ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಪೊಲೀಸ್‌ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗಿಸಲು ಇಂತಹ ಕೃತ್ಯವನ್ನು ಎಸಗಲಾಗುತ್ತಿದೆ. ಈ ಹಿಂದೆ ಶಿವಮೊಗ್ಗದ ರಾಗಿಗುಡ್ಡ, ಹುಬ್ಬಳ್ಳಿ, ಡಿ.ಜೆ.ಹಳ್ಳಿಯಲ್ಲಿ ನಡೆದ ಘಟನೆಗಳು ರಾಜ್ಯದ ಎಲ್ಲೆಡೆ ಮರುಕಳುಹಿಸುತ್ತಿವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ