ಮಾಜಿ ಸಚಿವ ಪ್ರಮೋದ ಮಧ್ವರಾಜ್ ಗೆ ಟಾಂಗ್ ನೀಡಿದ ಶಾಸಕ

ಶನಿವಾರ, 7 ಜುಲೈ 2018 (19:11 IST)
ಕರಾವಳಿಯ ಬೇಡಿಕೆಗಳನ್ನು ಉಡುಪಿ ಜಿಲ್ಲೆಯ ಶಾಸಕರು ಸಿ ಎಂಕುಮಾರಸ್ವಾಮೀಗೆ ತಡವಾಗಿ ನೀಡಿದ್ದಾರೆ ಎಂಬ ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಆರೋಪಕ್ಕೆ ಉಡುಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಇಂದು ಉಡುಪಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ್ರು ಪ್ರಮೋದ್ ಮದ್ವರಾಜ್ ಅವರ ಆರೋಪದಲ್ಲಿ ಹುರುಳಿಲ್ಲ. ಬಜೆಟ್ ಪ್ರತಿಗಳು ಮುದ್ರಣಕ್ಕೆಹೋಗುವ ಮುನ್ನವೇ ನಾನು ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಸಿಎಂ ಕುಮಾರಸ್ವಾಮೀ ಅವರನ್ನು ಭೇಟಿ
ಮಾಡಿ ಮೀನುಗಾರಿಕೆಗೆ ಡೀಸಿಲ್‍ಗೆ ಸಬ್ಸಿಡಿ ಸೇರಿದಂತೆ  ಕರಾವಳಿಯ ಬೇಡಿಕೆಯನ್ನು ಮುಂದಿಟ್ಟಿದೆ.

ಈ ಸಂದರ್ಭ ಸಿಎಂ ನಮ್ಮಬೇಡಿಕೆಯನ್ನುಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದ್ರೆ ಬಜೆಟ್‍ನಲ್ಲಿ ನಮ್ಮ ಬೇಡಿಕೆಗಳಿಗೆ ಹಾಗೂ ಕರಾವಳಿಯ  ಯಾವುದೇ ಯೋಜನೆಗಳನ್ನು ಘೋಷಣೆ ಮಾಡದೇ ಮಲತಾಯಿ ಧೋರಣೆ ತಾಳಿದ್ದಾರೆ. ಈ ವಿಚಾರವಾಗಿ
 ಸದನದ ಹೊರಗೂ ಹಾಗೂ ಒಳಗೂ ನಿರಂತರ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.

ಇನ್ನೂ ನಗರಸಭಾ ವ್ಯಾಪ್ತಿಯಾ ದಾರಿ ದೀಪದ ಅಸಮರ್ಪಕ ನಿರ್ವಹಣೆಯಲ್ಲಿ ಅಧಿಕಾರಿಯೊಂದಿಗೆ ಬಿಜೆಪಿ ಸದಸ್ಯರ ಕೈವಾಡವಿದೆ ಎಂಬ ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಆರೋಪಕ್ಕೆ ಶಾಸಕರು ತಿರುಗೇಟು ನೀಡಿದ್ರು. ಉಡುಪಿ ನಗರಸಭೆ ದಾರಿದೀಪಗಳ ನಿರ್ವಹಣೆಯನ್ನು ನಡೆಸುತ್ತಿದ್ದ ಅಧಿಕಾರಿಯನ್ನು ಪ್ರಸ್ತುತ್ತ ನಗರಸಭೆ ಆಡಳಿತದಲ್ಲಿರುವ ಕಾಂಗ್ರೆಸ್ ನೇಮಕ ಮಾಡಿರುವುದು. ದಾರಿದೀಪದ ನಿರ್ವಹಣೆಯಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದ. ಇದು ನಗರಸಭೆಯ ಆಡಳಿತ ಪಕ್ಷದ
ವೈಪಲ್ಯ.ತಮ್ಮ ತಪ್ಪನ್ನುಮರೆ ಮಾಚಲು ನಗರಸಭೆ ಅಧಿಕಾರಿ ಹಾಗೂ ಬಿಜೆಪಿ ಸದಸ್ಯರ ಮೇಲೆ ಮಾಜಿ ಸಚಿವರು ವ್ಯರ್ಥ ಆರೋಪ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳ ಆಡಳಿತದಲ್ಲಿ ನಗರಸಭೆ ಆಡಳಿತ ನಡೆಸುವ ಕಾಂಗ್ರೆಸ್ ಸಂಪೂರ್ಣ ವೈಪಲ್ಯವನ್ನು ಕಂಡುಕೊಂಡಿದ್ದು ಜನ ರೋಸಿ ಹೋಗಿದ್ದಾರೆ ಎಂದ್ರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ