ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗ್ರಂಥಾಲಯದ ಬದಲಿಗೆ ಅನಧಿಕೃತ ಹೋಟೆಲ್‌ ಆರಂಭ, ಹಣ ದುರ್ಬಳಿಗೆ

ಗುರುವಾರ, 5 ಮೇ 2022 (20:50 IST)
ಬೆಂಗಳೂರು: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಂದಾಯ ಇಲಾಖೆಯ ನೌಕರರ ಸಂಘಕ್ಕೆ ನೀಡಲಾದ ಜಾಗದಲ್ಲಿ ಹೋಟೆಲ್‌ ಆರಂಭಿಸಿರುವ ಬಗ್ಗೆ ತಿಳಿದುಬಂದಿದೆ. 
 
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಕಂದಾಯ ಭವನದ ಕಟ್ಟಡದಲ್ಲಿ ಗ್ರಂಥಾಲಯ ತೆರೆಯಲು ಮೀಸಲಿಟ್ಟಿದ್ದ ಜಾಗದಲ್ಲಿ ಹೋಟೆಲ್‌ ಆರಂಭಿಸಲಾಗಿದೆ. ಅನುದಾನ ಬಿಡುಗಡೆ ಮತ್ತು ಇತರ ವಿವರಗಳನ್ನು ಪರಿಶೀಲಿಸಿ ಅನಧಿಕೃತವಾಗಿ ಹೋಟೆಲ್ ತೆರೆದಿದ್ದಲ್ಲಿ ಮುಚ್ಚಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಆಗ್ರಹಿಸಿದ್ದಾರೆ.
 
ಯೋಜನೆ ಮತ್ತು ಶೌಚಗೃಹ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಅನಧಿಕೃತವಾಗಿ ಹೋಟೆಲ್ ತೆರೆಯಲಾಗಿದ್ದು, ಗ್ರಂಥಾಲಯ ಆರಂಭಿಸಿದಲ್ಲಿ ಅನುಕೂಲ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
 
7 ವರ್ಷಗಳಿಂದ ಹೋಟೆಲ್:
 
ಜಾಗದಲ್ಲಿ ಕಳೆದ 7 ವರ್ಷಗಳಿಂದ ಹೋಟೆಲ್ ನಡೆಸಲಾಗುತ್ತಿದೆ. ಇದಕ್ಕಾಗಿ ಸಂಸದರ ನಿಧಿಯಿಂದ ಬಿಡುಗಡೆ ಮಾಡಿದ 15 ಲಕ್ಷ ರೂ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಲೋಕಸಭಾ ಸದಸ್ಯರ ಕ್ಷೇತಾಭಿವೃದ್ಧಿ ಯೋಜನೆಯಲ್ಲಿ ಗ್ರಂಥಾಲಯ ಸಿರ್ಮಿಸಲಾಗಿದೆ ಎಂದು ವರದಿ ನೀಡಲಾಗಿದೆ ಎಂದು ಸಾಯಿದತ್ತಾ ಆರೋಪಿಸಿದ್ದಾರೆ.
 
ಗ್ರಂಥಾಲಯ ನಿರ್ಮಿಸದೆ ಹಣ ದುರ್ಬಳಿಗೆ :
 
ಉದ್ದೇಶಿತ ಗ್ರಂಥಾಲಯ ನಿರ್ಮಿಸದೆ ಹಣ ದುರ್ಬಳಿಗೆ ಮಾಡಿಕೊಳ್ಳಲಾಗಿದೆ. ಸಂಸತ್ ಸದಸ್ಯರ ಅನುದಾನದಿಂದ ಮೊದಲ ಕಂತಿನಲ್ಲಿ 2014ರ ಜೂ.24 ರಂದು 7.5 ಲಕ್ಷ ರೂ ಬಿಡುಗಡೆ ಮಾಡಲಾಗಿದೆ. ಸರ್ಕಾರದಿಂದ ಅನುದಾನ ಪಡೆದ ಬಗ್ಗೆ ಸ್ವೀಕೃತಿ ಪತ್ರವನ್ನು ಕಳಿಸುವಂತೆ ನೋಟಿಸ್ ನೀಡಿದರೂ ಅಧಿಕಾರಿಗಳು ಪ್ರತಿಕ್ರಿಯಿಸಿಲ್ಲ. ಅಂದರೆ ಮೊದಲ ಹಂತದ ಕಾಮಗಾರಿ ವೇಳೆಯೇ ಇಲ್ಲಿ ಗ್ರಂಥಾಲಯ ನಿರ್ಮಿಸಲಾಗಿತ್ತು ಎಂದು ವರದಿ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ