ನಗರಸಭೆಯಿಂದ ಅನಧಿಕೃತ ಮಸೀದಿ ಪರಿಶೀಲನೆ

ಭಾನುವಾರ, 6 ನವೆಂಬರ್ 2022 (17:56 IST)
ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯ ಆಶ್ರಯ ಯೋಜನೆ ಬಡಾವಣೆಯಲ್ಲಿ ಅನಧಿಕೃತ ಮಸೀದಿ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರ ಸಭೆ ಅಧ್ಯಕ್ಷ್ಯ ವರಸಿದ್ಧಿ ವೇಣುಗೋಪಾಲ್ ಸ್ಥಳ ಪರಿಶೀಲನೆ ನಡೆಸಿದ್ರು. ಅನೇಕ ವರ್ಷಗಳಿಂದ ಇಲ್ಲಿ ಮಸೀದಿ ಇದ್ದು, ಇದು ಅನಧಿಕೃತವಾಗಿ ಕಟ್ಟಲಾಗಿದೆ ಎಂದು ಆರೋಪ ಮಾಡಲಾಗ್ತಿದೆ. ಮಾಹಿತಿ ತಿಳಿದ ಕೂಡಲೇ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್​​​, ನಗರಸಭೆ ಆಯುಕ್ತ ಬಸವರಾಜ್​ ಸ್ಥಳ ಪರಿಶೀಲನೆ ನಡೆಸಿದ್ರು. 3 ದಿನಗಳ ಒಳಗೆ ಮಸೀದಿಗೆ ಸಂಬಂಧಿಸಿದ ದಾಖಲೆ ಹಾಜರುಪಡಿಸುವಂತೆ ಮಸೀದಿ ಆಡಳಿತ ಮಂಡಳಿಗೆ ಅವರು ಸೂಚನೆ ನೀಡಿದ್ದಾರೆ. ಯಾವುದೇ ದಾಖಲೆ ಇಲ್ಲದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ