ತಾಯಿ ಕ್ರಿಶ್ಚಿಯನ್, ಅಪ್ಪ ಮುಸಲ್ಮಾನ, ಮಗ ಹೇಗೆ ಬ್ರಾಹ್ಮಣ? ಗಾಂಧಿ ಕುಟುಂಬಕ್ಕೆ ತಿರುಗೇಟು ನೀಡಿದ ಕೇಂದ್ರ ಸಚಿವ

ಬುಧವಾರ, 30 ಜನವರಿ 2019 (19:11 IST)
ತಾಯಿ ಕ್ರಿಶ್ಚಿಯನ್, ಅಪ್ಪ ಮುಸಲ್ಮಾನ, ಮಗ ಹೇಗೆ ಬ್ರಾಹ್ಮಣ ಆಗಲು ಸಾಧ್ಯ? ಹೀಗಂತ ರಾಹುಲ್ ಗಾಂಧಿಯ ಬ್ರಾಹ್ಮಣ ಹೇಳಿಕೆಗೆ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ತಿರುಗೇಟು ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೆಹರು ಕುಟುಂಬದ ಧರ್ಮವನ್ನೇ ಪ್ರಶ್ನೆ ಮಾಡಿದರು. ಜಗತ್ತಿನ ಯಾವುದೇ ಪ್ರಯೋಗಾಲಯದಲ್ಲೂ ಇರದ ಹೈಬ್ರಿಡ್ ತಳಿ, ಕಾಂಗ್ರೆಸ್ ಲ್ಯಾಬ್ ನಲ್ಲಿ ಮಾತ್ರ ಇದೆ. ರಾಹುಲ್ ಗಾಂಧಿ ಸುಳ್ಳು ಹೇಳಿದರೂ ನಂಬುವಂತಹ ಸುಳ್ಳು ಹೇಳಬೇಕು. ಮೇ ತಿಂಗಳ ಅಂತ್ಯದೊಳಗೆ ಸಾಮೂಹಿಕ ರಾಜಕೀಯ ಆತ್ಮಹತ್ಯೆ ಕಾರ್ಯಕ್ರಮ ನಡೆಯಲಿದೆ ಎಂದು ಕಾಂಗ್ರೆಸ್ ಹಾಗೂ ವಿವಿಧ ಎಡಪಂಥೀಯ ಪಕ್ಷಗಳು ಮಾಡಿಕೊಂಡ ಮಹಾ ಘಟಬಂಧನ್ ಕುರಿತು ಲೇವಡಿ ಮಾಡಿದರು.

ಇನ್ನು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ ದೇಶಪಾಂಡೆರವರನ್ನು ಪರ್ಸಂಟೇಜ್ ಪಾಂಡೆ ಎಂದು ವ್ಯಂಗ್ಯವಾಡಿದ್ದು, ಜಿಲ್ಲೆಯ ರಸ್ತೆಗಳ ಅಭಿವೃದ್ಧಿಯಲ್ಲಿ ಪರ್ಸಂಟೇಜ್ ತೆಗೆದುಕೊಳ್ಳುತಿದ್ದಾರೆ. ಸದ್ಯದರಲ್ಲಿಯೇ ಚುನಾವಣೆಗೆ ಬರುತ್ತಾರೆ ಎನ್ನುವ ಮೂಲಕ ಟಾಂಗ್ ನೀಡಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ