108 ಅಡಿಯ ಹನುಮನ ಮೂರ್ತಿ ಅನಾವರಣ

ಶನಿವಾರ, 16 ಏಪ್ರಿಲ್ 2022 (20:23 IST)
ಹನುಮ ಜಯಂತಿಯ ಹಿನ್ನೆಲೆ ಗುಜರಾತ್‌ನ ಮೊರ್ಬಿಯಲ್ಲಿ 108 ಅಡಿ ಎತ್ತರದ ಹನುಮಂತನ ಪ್ರತಿಮೆಯನ್ನು ಪ್ರಧಾನಿ ಮೋದಿ ವರ್ಚುವಲ್​ ಆಗಿ ಅನಾವರಣಗೊಳಿಸಿದ್ದಾರೆ. ಹನುಮ ಜಯಂತಿಯ ಪ್ರಯುಕ್ತ ಗುಜರಾತ್‌ನ ಮೊರ್ಬಿಯಲ್ಲಿ ಹನುಮಂತನ ವಿಗ್ರಹವನ್ನು ಮೋದಿ ಅನಾವರಣಗೊಳಿಸಿದ್ದು, ಹನುಮನಿಗೆ ಸಂಬಂಧಿಸಿದ ಚಾರ್ ಧಾಮ್ ಯೋಜನೆಯಡಿ, ದೇಶದ 4 ದಿಕ್ಕಿನಲ್ಲಿ ಹನುಮಂತನ ಮೂರ್ತಿಯನ್ನು ಸ್ಥಾಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ 2ನೇ ವಿಗ್ರಹವನ್ನು ಪಶ್ಚಿಮ ದಿಕ್ಕಿನಲ್ಲಿರುವ, ಮೊರ್ಬಿಯ ಬಾಪು ಕೇಶವಾನಂದ ಶ್ರೀಗಳ ಆಶ್ರಮದಲ್ಲಿ ಸ್ಥಾಪಿಸಲಾಗಿದ್ದು, ಮೊದಲ ವಿಗ್ರಹವನ್ನು 2010ರಲ್ಲಿ ಉತ್ತರ ದಿಕ್ಕಿನಲ್ಲಿರುವ ಶಿಮ್ಲಾದಲ್ಲಿ ಸ್ಥಾಪಿಸಲಾಗಿತ್ತು. ಜೊತೆಗೆ ದಕ್ಷಿಣ ದಿಕ್ಕಿನಲ್ಲಿನ ರಾಮೇಶ್ವರಂನಲ್ಲಿ ಹನುಮಂತನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ