ಬೆಂಗಳೂರು: ರಾಜ್ಯ ಸರಕಾರ ಯಾವ ರಿಯಲ್ ಎಸ್ಟೇಟ್ ಸಲುವಾಗಿ ಕೆಲಸ ಮಾಡುತ್ತಿದೆ? ಯಾರನ್ನು ಓಲೈಕೆ ಮಾಡುತ್ತೀರಿ? ಅಥವಾ ಯಾರಿಂದ ಸೂಟ್‍ಕೇಸ್ ಬಂದಿದೆ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಪ್ರಶ್ನಿಸಿದ್ದಾರೆ.
ಹೆಬ್ಬಾಳದಲ್ಲಿ ಬಿ.ಎಂ.ಆರ್.ಸಿ.ಎಲ್ ಗೆ 45 ಎಕರೆ ಭೂಮಿಯನ್ನು ಮಂಜೂರು ಮಾಡುವ ಬದಲು ಕೇವಲ 9 ಎಕರೆ ಭೂಮಿಯನ್ನು ಕಾಂಗ್ರೆಸ್ ಸರ್ಕಾರ ಮಂಜೂರು ಮಾಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಬಿಜೆಪಿ ಮುಖಂಡರ ಜೊತೆ ಅವರು ಇಂದು ಹೆಬ್ಬಾಳದ ಫ್ಲೈ ಓವರ್ ಬಳಿ ಇರುವ ಸ್ಥಳಕ್ಕೆ ಭೇಟಿ ನೀಡಿದ್ದರು. ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ಭೂಮಿ ರೈತರದು. ಇಲ್ಲಿ ಮಲ್ಟಿ ಮೋಡ್ ಟ್ರಾನ್ಸ್‍ಪೋರ್ಟ್ ಸಿಸ್ಟಂ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಹೆಮ್ಮನಕೆರೆ ಮತ್ತು ಹೆಬ್ಬಾಳ ಗ್ರಾಮದ 55 ಎಕರೆ ಜಮೀನನ್ನು ಜೂನ್ 2000ದಲ್ಲಿ ಎಸ್.ಎಂ. ಕೃಷ್ಣ ಅವರ ಸರಕಾರ ಇದ್ದಾಗ ಗ್ಲೋಬಲ್ ಇನ್‍ವೆಸ್ಟರ್ಸ್ ಮೀಟ್ ವೇಳೆ ವಶಕ್ಕೆ ಪಡೆದಿದ್ದರು. ಬೇರೆಬೇರೆ ರೀತಿಯ ಸಾಂಸ್ಕøತಿಕ ಚಟುವಟಿಕೆಗೆ ಅವಕಾಶ ನೀಡುವುದು, ಹೋಟೆಲ್‍ಗಳ ಸ್ಥಾಪನೆಯ ಉದ್ದೇಶ ಇತ್ತು ಎಂದು ವಿವರಿಸಿದರು.
ಈ ಪೈಕಿ 4.5 ಎಕರೆ ಜಮೀನು ಲಕ್ಷ್ಮಿ ಟೂರಿಸಂಗೆ ನೀಡಿದ್ದಾರೆ. ಕೆಲವು ಭಾಗ ಮೆಟ್ರೊ, ರಸ್ತೆಗೆ ಹೋಗಿದೆ. ಅಂತಿಮವಾಗಿ ಉಳಿದಿರುವ 48 ಎಕರೆ ಜಮೀನನ್ನು ಮಲ್ಟಿ ಮೋಡ್ ಟ್ರಾನ್ಸ್‍ಪೋರ್ಟ್ ಹಬ್ ಮಾಡಬೇಕೆಂಬ ಬೇಡಿಕೆ ಸಾರ್ವಜನಿಕರದು. ಅದನ್ನು ಈಡೇರಿಸುವಂತೆ ಒತ್ತಾಯಿಸಿದರು.
ದೊಡ್ಡ ಪ್ರಮಾಣದ ಮೆಟ್ರೊ ಸ್ಟೇಷನ್ ಬೇಕು. ಬಿಎಂಟಿಸಿ ಡಿಪೋ ಅಭಿವೃದ್ಧಿ ಆಗಬೇಕಿದೆ.
ವಿಮಾನನಿಲ್ದಾಣಕ್ಕೆ ಇದೇ ಹೆಬ್ಬಾಳ ರಸ್ತೆ ಮೂಲಕ 1.5 ಲಕ್ಷ ವಾಹನಗಳು ಓಡಾಡುತ್ತಿವೆ. ವಿಮಾನನಿಲ್ದಾಣಕ್ಕೆ 4-5 ಸಾವಿರ ವಾಹನಗಳು ಓಡಾಡುತ್ತಿವೆ. ಹೆಬ್ಬಾಳದಲ್ಲೇ ಬೋರ್ಡಿಂಗ್ ಪಾಸ್, ಇಮಿಗ್ರೇಶನ್ ಸಂಬಂಧಿತ ವ್ಯವಸ್ಥೆಗೆ ವಿಮಾನನಿಲ್ದಾಣ ಪ್ರಾಧಿಕಾರಕ್ಕೆ ಕಚೇರಿ ಮಾಡಿಕೊಡಬೇಕಿದೆ. ದೇವನಹಳ್ಳಿ ರಸ್ತೆಯಲ್ಲಿ ವಾಹನ ಸಂದಣಿ ಕಡಿಮೆ ಮಾಡಲು ಅವಕಾಶವಿದೆ ಎಂದು ನುಡಿದರು.
ಸಬರ್ಬನ್‍ಗೆ ಜಮೀನು ಬೇಕು. ವರ್ತುಲ ರೈಲ್ವೆಗೆ ಜಮೀನು ಬೇಕು. ರೈಲ್ವೆ ಸ್ಟೇóಷನ್‍ಗೆ ಜಮೀನು ಬೇಕು. ಬಿಎಂಟಿಸಿಗೆ ಜಮೀನು ಅಗತ್ಯವಿದೆ. ಏರ್‍ಪೋರ್ಟಿಗೆ ವ್ಯವಸ್ಥೆಗೂ ಜಮೀನು ಅವಶ್ಯ. ಮೇ 1ರಂದು ಕಾಂಗ್ರೆಸ್ ಸರಕಾರವು 45 ಎಕರೆ ಜಮೀನನ್ನು ಮಲ್ಟಿ ಮೋಡ್ ಟ್ರಾನ್ಸ್‍ಪೋರ್ಟ್ ಹಬ್ ಮಾಡಲು ಕೊಡುವುದಾಗಿ ತಿಳಿಸಿತ್ತು. ಕೇವಲ 1 ತಿಂಗಳಲ್ಲಿ ಇದು ವ್ಯತ್ಯಾಸ ಆದುದೇಕೆ ಎಂದು ಕೇಳಿದರು.
2004ರಲ್ಲಿ ಭೂ ವಶಕ್ಕೆ ಪಡೆಯುವ ಸಂಬಂಧ ಅಂತಿಮ ಅಧಿಸೂಚನೆ ಆಗಿತ್ತು. ಇವತ್ತಿನತನಕ ಈ ಜಮೀನು ಖಾಲಿ ಬಿದ್ದಿದ್ದು, ಕಸ ತುಂಬುತ್ತಿದೆ ಎಂದು ಆಕ್ಷೇಪಿಸಿದರು. ರೈತರಿಗೆ ಪರಿಹಾರ ಮೊತ್ತ ಕೊಟ್ಟಿಲ್ಲ; ಕೆಐಎಡಿಬಿ ಆವತ್ತು ಜಾಗವನ್ನು ಲೇಕ್ ವ್ಯೂ ಟೂರಿಸಂ ಸಲುವಾಗಿ ವಶಕ್ಕೆ ಪಡೆದಿದ್ದು, ಇದರ ಮಾಲೀಕತ್ವ ಕೆಐಎಡಿಬಿ ಅಡಿ ಇದೆ ಎಂದು ತಿಳಿಸಿದರು.
ಇಲ್ಲೇ ರೋಹಿಂಗ್ಯಾಗಳು, ಅಪರಾಧ ಹಿನ್ನೆಲೆ ಉಳ್ಳವರು ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಇದರ ಕುರಿತು ತನಿಖೆ ನಡೆಸಬೇಕು. ಎನ್‍ಐಎ ಇದರ ತನಿಖೆ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ದೇಶದ್ರೋಹ ಮಾಡುವ ವ್ಯಕ್ತಿಗಳು ಇಲ್ಲಿ ನೆಲೆಸಿದ್ದಾರೆ. 48 ಎಕರೆ ಜಾಗವನ್ನೂ ಸರಕಾರ ಕೆಐಎಡಿಬಿ ವಶಕ್ಕೆ ಪಡೆದು ಮಲ್ಟಿ ಮೋಡ್ ಟ್ರಾನ್ಸ್‍ಪೋರ್ಟ್ ಸಿಸ್ಟಂಗೆ ಕೊಡಬೇಕೆಂದು ಅವರು ಆಗ್ರಹವನ್ನು ಮುಂದಿಟ್ಟರು. ರೈತರಿಗೆ ಇವತ್ತಿನ ಮಾರುಕಟ್ಟೆ ದರದಲ್ಲಿ ಪರಿಹಾರಧನ ನೀಡಬೇಕು ಎಂದು ತಿಳಿಸಿದರು.