ದೊಡ್ಡಗೌಡರ ಕೋಟೆಗೆ ಇಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಎಂಟ್ರಿ

ಬುಧವಾರ, 26 ಏಪ್ರಿಲ್ 2023 (09:15 IST)
ಮಂಡ್ಯ : ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಕಮಾಲ್ ಮಾಡಲು ರಣತಂತ್ರ ನಡೆಸುತ್ತಿದೆ. ಚುನಾವಣೆ ಘೋಷಣೆಗೂ ಮುನ್ನ ಸಕ್ಕರೆ ನಾಡಿಗೆ ಮೋದಿ ಭೇಟಿ ನೀಡಿ ಹವಾ ಎಬ್ಬಿಸಿದ್ದರು.
 
ಈಗ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಎಂಟ್ರಿ ಕೊಡುತ್ತಿದ್ದಾರೆ. ಆ ಮೂಲಕ ಒಕ್ಕಲಿಗ ಮತ ಸೆಳೆಯುವ ಪ್ಲಾನ್ ನಡೆದಿದೆ. ಹಳೇ ಮೈಸೂರು ಮೇಲೆ ಹೆಚ್ಚು ಫೋಕಸ್ ಮಾಡಿರುವ ಬಿಜೆಪಿ ಈ ಬಾರಿ ಮಂಡ್ಯದಲ್ಲೂ ಎರಡ್ಮೂರು ಕ್ಷೇತ್ರಗಳನ್ನ ಗೆಲ್ಲುವ ಗುರಿ ಹೊಂದಿದೆ. ಅದಕ್ಕಾಗಿಯೇ ರಾಷ್ಟ್ರೀಯ ನಾಯಕರು ಮಂಡ್ಯಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.

ಇಂದು ಬೆಳಗ್ಗೆ 10:30ಕ್ಕೆ ಮೈಸೂರಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಿಎಂ ಯೋಗಿ ಆದಿತ್ಯನಾಥ್, ಹೆಲಿಕಾಪ್ಟರ್ ಮೂಲಕ ಮಂಡ್ಯದ ಪಿಇಎಸ್ ಕಾಲೇಜು ಹೆಲಿಪ್ಯಾಡ್ಗೆ ಬಂದಿಳಿಯಲಿದ್ದಾರೆ. ಸಂಜಯ್ ವೃತ್ತದಿಂದ ಮಹಾವೀರ್ ವೃತ್ತದವರೆಗೆ 1 ಕಿ.ಮೀ ರೋಡ್ ಶೋ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ