ಕೆ ಎಸ್ ಆರ್ ಟಿಸಿ ಬಸ್ ಗಳಲ್ಲಿ ದಟ್ಟನೆ ನಿಯಂತ್ರಿಸಲು ಬಿಎಂಟಿಸಿ ಬಸ್ ಗಳ ಬಳಕೆ

ಶುಕ್ರವಾರ, 20 ಅಕ್ಟೋಬರ್ 2023 (13:34 IST)
ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬ ಹಿನ್ನಲೆ ಪ್ರಯಾಣಿಕರ ಅನುಕೂಲಕ್ಕೆ ಹೊಸ ಪ್ಲಾನ್  ಕೆ ಎಸ್ ಆರ್ ಟಿಸಿ ರೂಪಿಸಿದೆ.ಹಬ್ಬದ ಪ್ರಯುಕ್ತ ಹೊರ ಜಿಲ್ಲೆಗಳಿಗೂ ಬಿಎಂಟಿಸಿ ಬಸ್ ಸಂಚಾರ ಮಾಡುತ್ತೆ .ಅಕ್ಟೋಬರ್ 23-24 ದಸರಾ ಹಬ್ಬದ ಹಿನ್ನಲೆಯಲ್ಲಿ ರಾಜ್ಯದ ವಿವಿಧೆಡೆ ಬಿಎಂಟಿಸಿ ಸಂಚಾರ ಮಾಡಲಿದೆ.ಇಷ್ಟು ದಿನ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಾತ್ರ ಬಿಎಂಟಿಸಿ ಸಂಚಾರ ಮಾಡುತ್ತಿತ್ತು.ಆದ್ರೆ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಹೊರ ಊರುಗಳಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.ಹೀಗಾಗಿ ಅ,21,22,23 ವರಿಗೆ ಪ್ರಯಾಣಿಕರ ಅನುಕೂಲಕ್ಕೆ ವಿವಿಧ ಜಿಲ್ಲೆಗಳಿಗೆ ಬಿಎಂಟಿಸಿ ಬಸ್ ಗಳ ಕಾರ್ಯಾಚರಣೆ ಮಾಡಲು ನಿರ್ಧಾರಮಾಡಿದೆ.
 
ದಾವಣಗೆರೆ, ಶಿವಮೊಗ್ಗ, ಹೊಸದುರ್ಗ,ಬಳ್ಳಾರಿ, ಹಾಸನ,ಮತ್ತು ಧರ್ಮಸ್ಥಳ ಕ್ಕೆ ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ಗಳ ಕಾರ್ಯಾಚರಣೆ ನಡೆಸಲಿದೆ.ನಿತ್ಯ 100 ಬಸ್ ಗಳ ಕಾರ್ಯಾಚರಣೆ ಮಾಡಲು ಬಿಎಂಟಿಸಿ ನಿರ್ಧಾರಮಾಡಿದೆ‌.ಪೂರ್ವ,ಉತ್ತರ,ದಕ್ಷಿಣ, ಹಾಗೂ ಈಶಾನ್ಯ ವಲಯದ ಡಿಪೋಗಳಿಂದ ಬಸ್ ಗಳ ಸೇವೆ ಕಾರ್ಯಾರಂಭ ಮಾಡಲಿದೆ.ಅಕ್ಟೋಬರ್-10 ರಂದು ಕೆಎಸ್ಆರ್ಟಿಸಿ ಯಲ್ಲಿ ನಡೆದ ಸಭೆ ನಿರ್ಧಾರದಂತೆ ಬಸ್ ಓಡಿಸಲು ಸೂಚನೆ ನೀಡಿದ್ದು,ಕೆ ಎಸ್ ಆರ್ ಟಿಸಿ ಮನವಿ ಆಧಾರದ ಮೇಲೆ ಹೊರ ಜಿಲ್ಲೆಗಳಿಗೂ ಬಸ್ ಓಡಿಸಲು ಬಿಎಂಟಿಸಿ ತೀರ್ಮಾನ ಮಾಡಿದೆ.ಕೆ ಎಸ್ ಆರ್ ಟಿಸಿ ಬಸ್ ಗಳಲ್ಲಿ ದಟ್ಟನೆ ನಿಯಂತ್ರಿಸಲು ಬಿಎಂಟಿಸಿ ಬಸ್ ಗಳ ಬಳಕೆ ಮಾಡಲಾಗುತ್ತೆ.ಇದೇ ಮೊದಲ ಬಾರಿಗೆ ಹೊರ ಜಿಲ್ಲೆಗಳಿಗೆ ಬಿಎಂಟಿಸಿ ಬಸ್ ಗಳ ಕಾರ್ಯಾಚರಣೆ ನಡೆಯುತ್ತಿದ್ದು,ಹಬ್ಬದ ಪ್ರಯುಕ್ತ ಮೂರು ದಿನ ಮಾತ್ರ ಬಿಎಂಟಿಸಿ ಬಸ್ ಗಳು ರಾಜ್ಯದ ವಿವಿಧೆಡೆ ಸಂಚಾರ ಮಾಡಲಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ