ಉತ್ತರಪ್ರದೇಶ ಎಲೆಕ್ಷನ್‌- 30 ವರ್ಷದಲ್ಲಿ ಇದೇ ಮೊದಲ ಬಾರಿಗೆ ಎಲ್ಲಾ ಕ್ಷೇತ್ರಗಳಿಂದಲೂ ಕಾಂಗ್ರೆಸ್‌ ಕಣಕ್ಕೆ

ಶನಿವಾರ, 5 ಫೆಬ್ರವರಿ 2022 (20:53 IST)
ಉತ್ತರಪ್ರದೇಶದ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಪ್ರಚಾರದ ಕಾವು ಹೆಚ್ಚಾಗಿದೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಕಾಂಗ್ರೆಸ್‌ ಎಲ್ಲಾ ಚುನಾವಣಾ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿದೆ.
ಘಾಜಿಯಾಬಾದ್‌ ನಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ಮಾತನಾಡಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ನಾವು ನಮ್ಮ ಸಾಮರ್ಥ್ಯದಿಂದ ಹೋರಾಡುತ್ತಿದ್ದೇವೆ. ಕಳೆದ 30 ವರ್ಷದಲ್ಲಿ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ಎಲ್ಲಾ ಕ್ಷೇತ್ರಗಳಿಂದ ಕಾಂಗ್ರೆಸ್‌ ಕಣಕ್ಕಿಳಿದಿದೆ ಎಂದಿದ್ದಾರೆ.
ಸಮಾಜವಾದಿ ಪಕ್ಷದಿಂದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಚುನಾವಣಾ ಕಣಕ್ಕಿಳಿಯಲಿದ್ದು, ನಹಿತ್‌ ಹಸನ್‌, ಅಬ್ದುಲ್ಲಾ ಅಜಮ್‌ ಖಾನ್‌ ಸೇರಿ ಹಲವು ಪ್ರಮುಖರು ಸ್ಪರ್ಧಿಸಲಿದ್ದಾರೆ.
ಉತ್ತರ ಪ್ರದೇಶದಲ್ಲಿ ಒಟ್ಟು 7 ಹಂತದಲ್ಲಿ ಚುನಾವಣೆ ನಡೆಯಲ್ಲಿದ್ದು, ಮೊದಲ ಹಂತದ ಮತದಾನ ಫೆ.10ರಂದು ನಡೆಯಲಿದೆ. ಫೆ.14, ಫೆ.20, ಫೆ. 23, ಫೆ.27, ಮಾ.3, ಮಾ.7ರಂದು ಉಳಿದ 6 ಹಂತಗಳ ಮತದಾನ ನಡೆಯಲಿದೆ. ಮಾ.10ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ