ಪ್ರಜ್ವಲ್‌ ರೇವಣ್ಣ ಈಗ ಸೆಂಟ್ರಲ್‌ ಜೈಲ್‌ನಲ್ಲಿ ಕ್ಲರ್ಕ್‌: ಮಾಜಿ ಸಂಸದನಿಗೆ ದಿನಕೂಲಿ ಎಷ್ಟು ಗೊತ್ತಾ

Sampriya

ಭಾನುವಾರ, 7 ಸೆಪ್ಟಂಬರ್ 2025 (10:29 IST)
Photo Credit X
ಬೆಂಗಳೂರು: ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೈಲಾಧಿಕಾರಿಗಳು ಹೊಸ ಜವಾಬ್ದಾರಿ ನೀಡಿದ್ದಾರೆ. 

ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಪ್ರಜ್ವಲ್‌ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.  ಈಗ ಪ್ರಜ್ವಲ್‌ಗೆ ಜೈಲಿನ ಅಧಿಕಾರಿಗಳು ಕೆಲಸ ಹಂಚಿಕೆ ಮಾಡಿದ್ದಾರೆ. ಕಾರಾಗೃಹದಲ್ಲಿರುವ ಗ್ರಂಥಾಲಯದಲ್ಲಿ ಆತನಿಗೆ ಕ್ಲರ್ಕ್‌ ಕೆಲಸ ನೀಡಲಾಗಿದೆ.

ವಿಚಾರಣಾಧೀನ ಕೈದಿಗಳು ಹಾಗೂ ಸಜಾಬಂದಿಗಳಿಗೆ ಜೈಲಿನ ಗ್ರಂಥಾಲಯದಿಂದ ‌ಪುಸ್ತಕ ವಿತರಣೆ ಮಾಡುವುದು, ಯಾವ ಕೈದಿಗೆ ಯಾವ ಪುಸ್ತಕ ನೀಡಲಾಗಿದೆ ಎಂಬುದನ್ನು ಪುಸ್ತಕದಲ್ಲಿ ನೋಂದಣಿ ಮಾಡಿಕೊಳ್ಳುವ ಕೆಲಸವನ್ನು ಪ್ರಜ್ವಲ್‌ಗೆ ನೀಡಲಾಗಿದೆ. ಎಂಜಿನಿಯರಿಂಗ್‌ ಪದವೀಧರನಾಗಿರುವ ಪ್ರಜ್ವಲ್ ರೇವಣ್ಣಗೆ ಈ ಕೆಲಸಕ್ಕೆ ಪ್ರತಿದಿನಕ್ಕೆ ₹524 ಕೂಲಿ ನಿಗದಿಪಡಿಸಲಾಗಿದೆ.

ಪ್ರಜ್ವಲ್‌ ವಿರುದ್ಧ ಸಿಐಡಿ ಹಾಗೂ ಹಾಸನ ಜಿಲ್ಲೆಯ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಒಟ್ಟು ಪ್ರಕರಣಗಳು ದಾಖಲಾಗಿದ್ದವು. ಆ ಪೈಕಿ ಒಂದು ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆಗಸ್ಟ್‌ 2ರಂದು ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ