ಶಕ್ತಿ ಯೋಜನೆಗೆ ಖಾಲಿ ಆಯ್ತು ಅನುದಾನ

ಭಾನುವಾರ, 29 ಅಕ್ಟೋಬರ್ 2023 (16:00 IST)
ಶಕ್ತಿ ಯೋಜನೆಗೆ ಮೀಸಲಿಟ್ಟ 2800ಕೋಟಿಯಲ್ಲಿ ಐದೇ ತಿಂಗಳಿಗೆ 2ಸಾವಿರ ಕೋಟಿ ಖಾಲಿಯಾಗಿದೆ.ಸರ್ಕಾರ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣಕ್ಕೆ 2800ಕೋಟಿ ಮೀಸಲಿಟ್ಟಿತ್ತು.ಯೋಜನೆ ಯಶಸ್ಸಿನ ಬೆನ್ನೆಲ್ಲೇ ಅನುಧಾನ ಕೊರತೆಯ ಅತಂಕ ಶುರುವಾಗಿದೆ.
 
ಮೀಸಲಿಟ್ಟ ಹಣದಲ್ಲಿ ಕೇವಲ ಇನ್ನೊಂದು ತಿಂಗಳು ಮಾತ್ರ ಯೋಜನೆಯನ್ನು ನಡೆಸಬಹುದು.ಯೋಜನೆ ಮುಂದುವರಿಯಲು ಸರ್ಕಾರ ಇನ್ನಷ್ಟು ಅನುಧಾನ ನೀಡೋದು ಅನಿವಾರ್ಯ.ನವೆಂಬರ್ ಅಂತ್ಯಕ್ಕೆ ಯೋಜನೆಗೆ ಮೀಸಲಿಟ್ಟ ಹಣ ಖಾಲಿಯಾಗಲಿದೆ.

ಶಕ್ತಿಯೋಜನೆಗೆ ಶಕ್ತಿ ತುಂಬಲು ಅನುದಾನ ಬಿಡುಗಡೆ ಮಾಡೋದು ಅನಿವಾರ್ಯವಾಗಿದ್ದು,ಸಾರಿಗೆ ಸಚಿವರಿಗೆ ಅನುದಾನದ ಕೊರತೆ ತಲೆ ನೋವವಾಗಿದೆ.ಯೋಜನೆ 10ವರ್ಷಗಳ ವರೆಗೆ ಮುಂದುವರೆಯಲಿದೆ ಎಂದು ರಾಮಲಿಂಗ ರೆಡ್ಡಿ ಹೇಳಿದ್ರು.ಆದ್ರೆ ಸರ್ಕಾರ ಹಣ ಬಿಡುಗಡೆ ಮಾಡದೇ ಇದ್ರೆ ಸಾರಿಗೆ ನಿಗಮಕ್ಕೆ ಆರ್ಥಿಕ ಸಂಕಷ್ಟ ಎದುರಾಗಲಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ