ರಾಜ್ಯದ ವಿವಿಧ ಜಿಲ್ಲೆಗಳೂ ಕೂಡ 15 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡಲು ಸಜ್ಜಾಗಿವೆ.
ಧಾರವಾಡ ಜಿಲ್ಲೆಯಲ್ಲಿ 95,774 ಮಕ್ಕಳಿಗೆ ಲಸಿಕೆ ನೀಡಿದ್ರೆ, ಕಲಬುರಗಿ ಜಿಲ್ಲೆಯಲ್ಲಿ 1 ಲಕ್ಷದ 60 ಸಾವಿರ, ಬಾಗಲಕೋಟೆಯಲ್ಲಿ, 1 ಲಕ್ಷ 2 ಸಾವಿರ, ಬೀದರ್ 1,05,083, ತುಮಕೂರು, 1 ಲಕ್ಷದ 22 ಸಾವಿರ , ಬೆಳಗಾವಿ ಜಿಲ್ಲೆಯಲ್ಲಿ 3,01,828, ರಾಯಚೂರು 1,14,953, ಮೈಸೂರು 1,47,279, ಕೊಪ್ಪಳ 84, 516,
ಬಳ್ಳಾರಿ-ವಿಜಯನಗರ 1,70344, ರಾಮನಗರ 48, 700, ಉಡುಪಿ 45, 600, ಚಿತ್ರದುರ್ಗ76,142, ಚಿಕ್ಕಮಗಳೂರು 48,707, ಶಿವಮೊಗ್ಗದಲ್ಲಿ 83,831, ಹಾವೇರಿಯಲ್ಲಿ 77,677,ಯಾದಗಿರಿ ಜಿಲ್ಲೆಯಲ್ಲಿ 74,953, ಬೆಂಗಳೂರು ಗ್ರಾ. ಜಿಲ್ಲೆ 48,865, ಗದಗದಲ್ಲಿ 55,880 ಹಾಗೂ ವಿಜಯನಗರ ಜಿಲ್ಲೆಯಲ್ಲಿ 2,45,352 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುತ್ತೆ.
2007ರ ನಂತ್ರ ಹುಟ್ಟಿದವರು ಇಂದಿನಿಂದ ಲಸಿಕೆ ಪಡೆದುಕೊಳ್ಳಬಹುದು. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಲಸಿಕಾ ಕೇಂದ್ರಗಳಲ್ಲಿ ವ್ಯಾಕ್ಸಿನ್ ಡ್ರೈವ್ ನಡೆಯಲಿದ್ದು, ನೋಂದಣಿ ಮಾಡಿಕೊಂಡು ವ್ಯಾಕ್ಸಿನ್ ಪಡೆದುಕೊಳ್ಳಬಹುದಾಗಿದೆ.