ಕೋಟೆ ನಾಡಲ್ಲಿ ತುಂಬಿದ ವಾಣಿವಿಲಾಸ ಜಲಾಶಯ

ಶುಕ್ರವಾರ, 11 ಅಕ್ಟೋಬರ್ 2019 (18:15 IST)
ಸತತ ಬರಗಾಲಕ್ಕೆ ತುತ್ತಾಗಿದ್ದ ಜಿಲ್ಲೆಯಲ್ಲಿ ಸುರಿಯುತ್ತಿರೋ ಮಳೆಗೆ ಕೆರೆ ಕೋಡಿ ಬಿದ್ದದ್ದು, ಜನರ ಹರ್ಷಕ್ಕೆ ಕಾರಣವಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಈಗ ಮಳೆ ಆರ್ಭಟಿಸುತ್ತಿದೆ. ಜಿಲ್ಲೆಯ ಏಕೈಕ ಜಲಾಶಯ ವಾಣಿವಿಲಾಸ. ಈ ಜಲಾಶಯಕ್ಕೆ 5 ಅಡಿ ನೀರು ಹರಿದು ಬಂದಿದ್ದು, ಇಂದಿಗೆ ಜಲಾಶಯದ ನೀರಿನ ಮಟ್ಟ 66.7 ಅಡಿಯಷ್ಟಿದೆ.

ಹಿರಿಯೂರು ತಾಲೂಕಿನ ಹಲವೆಡೆ ಮಳೆಯಾಗಿದ್ದು, ರಾತ್ರಿ ಸುರಿದ ಮಳೆಗೆ ತಾಲೂಕಿನ ಗೌಡನಹಳ್ಳಿ ಕೆರೆ ಇಪ್ಪತ್ತು ವರ್ಷಗಳ ನಂತರ ಕೋಡಿ ಬಿದ್ದಿದೆ.

ಗೌಡನಹಳ್ಳಿ, ರಂಗಾಪುರ, ಕೆರೆಕೋಡಿಹಟ್ಟಿ ಗ್ರಾಮಸ್ಥರು ಇದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ನಗರಕ್ಕೆ ಹೊಂದಿಕೊಂಡಂತೆ ಇರುವ ಲಕ್ಕವನಹಳ್ಳಿ ಡ್ಯಾಂ ಕೂಡ ತುಂಬಿದೆ. ಸತತ ಬರಗಾಲಕ್ಕೆ ಕಂಗೆಟ್ಟಿದ್ದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ