ತಮಿಳುನಾಡಿನ 4 ಜಿಲ್ಲೆಗಳಲ್ಲಿ ವರುಣಾರ್ಭಟ

ಗುರುವಾರ, 1 ಸೆಪ್ಟಂಬರ್ 2022 (21:45 IST)
ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ತಮಿಳುನಾಡಿನ 4 ಜಿಲ್ಲೆಗಳಾದ ನಾಗಪಟ್ಟಿಣಂ, ಮೈಲಾಡುತುರೈ ಮತ್ತು ತಂಜಾವೂರುಗಳಲ್ಲಿನ ಇಂದು ಶಾಲಾ-ಕಾಲೇಜು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ ತಮಿಳುನಾಡಿನ ಮೇಲೆ ಇರುವ ಚಂಡಮಾರುತದ ಪ್ರಭಾವದಿಂದ ರಾಜ್ಯದ ದಕ್ಷಿಣ ಭಾಗ ಮತ್ತು ಅದರ ಒಳನಾಡು ಜಿಲ್ಲೆಗಳಿಗೆ ಭಾರಿ ಮಳೆಯನ್ನು ಪ್ರಭಾವ ಬೀರುತ್ತಿದೆ. ನಾಳೆ ನೀಲಗಿರಿ, ಕೊಯಮತ್ತೂರು, ತಿರುಪ್ಪೂರು, ಥೇನಿ, ದಿಂಡಿಗಲ್, ಈರೋಡ್, ಸೇಲಂ, ಕರೂರ್, ನಾಮಕ್ಕಲ್, ಧರ್ಮಪುರಿ, ಕೃಷ್ಣಗಿರಿ, ತಿರುಪತ್ತೂರು ಮತ್ತು ತಿರುಚಿರಾಪಳ್ಳಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ 3 ಮತ್ತು 4 ರಂದು ತಮಿಳುನಾಡಿನ ನೀಲಗಿರಿ, ಕೊಯಮತ್ತೂರು, ತಿರುಪ್ಪೂರು, ಥೇಣಿ, ದಿಂಡಿಗಲ್, ಈರೋಡ್, ಸೇಲಂ, ಧರ್ಮಪುರಿ, ಕೃಷ್ಣಗಿರಿ, ತಿರುಪತ್ತೂರು, ವೆಲ್ಲೂರು, ರಾಣಿಪೇಟ್ ಮತ್ತು ತಿರುವಣ್ಣಾಮಲೈ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ