ತರಕಾರಿ ಬೆಲೆ ಒಂದು ತಿಂಗಳಿಂದ ದುಬಾರಿಯಾಗಿದ್ದು, ಹೆಚ್ಚಾದ ಬೆಲೆಗೆ ಜನ ಸಾಮಾನ್ಯರು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ಕೆ ಆರ್ ಮಾರುಕಟ್ಟೆಯಲ್ಲಂತೂ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ತರಕಾರಿ ರೇಟು ಹೆಚ್ಚಾದ ಹಿನ್ನೆಲೆಯಲ್ಲಿ ಜನ ಬಂದರೂ ಕಡಿಮೆ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ. ಟೊಮ್ಯಾಟೋ ಹಣ್ಣಿನ ಬೆಲೆ ತುಂಬಾ ಏರುತ್ತಿದೆ. ಈ ವಾರದಲ್ಲಿ ಕೇಜಿಯೊಂದಕ್ಕೆ .150 ತನಕ ಏರಿದ್ದು, ಸದ್ಯ .80ಕ್ಕೆ ಮಾರಾಟವಾಗುತ್ತಿದೆ. ಬೀನ್ಸ್ ಕೆಜಿಗೆ .120, ಕ್ಯಾಪ್ಸಿಕಂ .120, ಹಸಿ ಮೆಣಸಿನಕಾಯಿ .80, ಹಿರೇಕಾಯಿ .60, ಬೆಂಡೆಕಾಯಿ .60, ತುಪ್ಪದ ಹಿರೇಕಾಯಿ.60, ಹಾಗಲಕಾಯಿ .60, ಸೌತೆಕಾಯಿ .60, ಬೀಟ್ ರೂಟ್ .60, ಬದನೆಕಾಯಿ .40, ಚವಳೆಕಾಯಿ .40, ಆಲೂಗಡ್ಡೆ .30, ಹೂಕೋಸೊಂದಕ್ಕೆ .3, ಲಿಂಬೆಹಣ್ಣು .20ಗೆ ಮೂರು ಅದೇರೀತಿ ಸೊಪ್ಪಿನ ಬೆಲೆಯೂ ಹೆಚ್ಚಳವಾಗಿದ್ದು ಹತ್ತು ರೂಪಾಯಿಗೆ ಮೂರರಂತೆ ಸಿಗುತ್ತಿದ್ದ ಸೊಪ್ಪು ಒಂದೊಂದು ಕಟ್ಟು ಸಿಗುತ್ತಿದೆ. ತರಕಾರಿ ಬೆಲೆ ಹೀಗೆ ಏರಿಕೆ ಆಗಿತ್ತಾ ಕಾದುನೋಡಬೇಕಾಗಿದೆ.