ಮಹಿಳೆಯರ ಉಚಿತ ಪ್ರಯಾಣ ಶುರುವಾದಗಿನಿಂದ ಇಲ್ಲಿಯವರೆಗೆ, ಸಾರಿಗೆ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿ ಗೊಳಿಸಲು ಒಂದಲ್ಲ ಒಂದು ಮೀಟಿಂಗ್ ಗಳು ನಡೆಯುತ್ತೀವಿ, ಅದರಂತೆ ಇಂದು ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಘಟಕ ವ್ಯವಸ್ಥಾಪಕರಿಗೆ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಒಟ್ಟು ತರಬೇತಿಗೆಂದು ಮೂರು ಬಸ್ಸುಗಳಿಗೆ ಚಾಲನೆ ನೀಡಲಾಗಿದೆ, ಜೊತೆಗೆ ನಗರದ ಎಲ್ಲಾ ಡಿಪೋಗಳಿಗೆ ಒಂದೊಂದು ತುರ್ತು ಬೂಲೋರೋ ವಾಹನಗಳಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ.ಇನ್ನೂ ಪ್ರತಿ ಡಿಪೋಗೊಂದು ಸಾರಥಿ ಮಾದರಯಲ್ಲಿರುವ ಬೂಲೋರೋ, ಜೊತೆಗೆ 3 ತರಬೇತಿ ಬಸ್ಗಳು,3 ಶಿಫ್ಟ್ ಡಿಸೇರ್ ವಾಹನಗಳಿಗೆ ಚಾಲನೆ ಸಿಕ್ಕಿದೆ,ಮೂರು ಬಸ್ಸುಗಳಿಂದ ಹೊಸ ಹೊಸ ಚಾಲಕರಿಗೆ ವಡ್ರಳ್ಳಿಯಲ್ಲಿ ಟ್ರೈನಿಂಗ್ ಕೊಡಲು ತೀರ್ಮಾನಿಸಲಾಗಿದೆ,ಮತ್ತು ಮೂರು ಶಿಫ್ಟ್ ಡಿಸೇರ್ ವಾಹನಗಳು ಸಾರಿಗೆ ಸಿಬ್ಬಂದಿಯಾ ಸಹಾಯಕ್ಕೆ ನೇಮಿಸಲಾಗಿದೆ,ಇನ್ನೂ ನಗರದ ಎಲ್ಲಾ ಡಿಪೋಗಳಿಗೆ ಸಾರಥಿ ಮಾದರಿಯಲ್ಲಿ ಬೂಲೋರೋ ಹಂಚಿಕೆ ಮಾಡಿರುವ ವಾಹನಗಳು ಪ್ರಯಾಣಿಕರಿಗೆ ಅಥವಾ ಸಾರಿಗೆ ಸಿಬ್ಬಂದಿಯು ರಸ್ತೆ ಮಾರ್ಗದಲ್ಲಿ ಚಲಿಸುವಾಗ ಯಾವುದೇ ಅಪಘಾತ ಅಥವಾ ತುರ್ತುಸ್ಥಿತಿ ಉಂಟಾದರೆ ಅಂತಹ ಸಮಯಕ್ಕೆ ಸರಿಯಾಗಿ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಇಂತಹ ಬೂಲೊರೋ ವಾಹನಗಳನ್ನು ನೇಮಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಯವರು ಸ್ಪಷ್ಟಪಡಿಸಿದ್ದಾರೆ.