ದೇಶ ಕಾಯುವ ಯೋಧನ ಕುಟುಂಬಕ್ಕೆ ಊರಿಂದ ಬಹಿಷ್ಕಾರ ಹಾಕಿದ ಗ್ರಾಮಸ್ಥರು

ಗುರುವಾರ, 20 ಫೆಬ್ರವರಿ 2020 (11:52 IST)
ಬೆಳಗಾವಿ : ಅಂಗನವಾಡಿ ನಿರ್ಮಿಸೋಕೆ ಜಾಗ ಕೊಡಲಿಲ್ಲ ಎಂಬ ಕಾರಣಕ್ಕೆ ಗ್ರಾಮಸ್ಥರೆಲ್ಲಾ ಸೇರಿ ಯೋಧರೊಬ್ಬರ  ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಘಟನೆ ಬೆಳಗಾವಿಯ ರಾಮದುರ್ಗದ ತೋಟಗಿಟ್ಟಿ ಗ್ರಾಮದಲ್ಲಿ  ನಡೆದಿದೆ.


ಯೋಧ ವಿಠಲ್ ಎಂಬುವರ ತಂದೆಗೆ ಸೇರಿದ ಜಾಗದಲ್ಲಿ ಊರಿನ ಮುಖಂಡರು ಅಂಗನವಾಡಿ ನಿರ್ಮಿಸಲು ಮುಂದಾಗಿದ್ದರು. ಆದರೆ ಯೋಧನ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಅವರ ಕುಟುಂಬಕ್ಕೆ ಊರಿಂದ ಬಹಿಷ್ಕಾರ ಹಾಕಿದ್ದಲ್ಲದೇ ಅವರ ಕುಟುಂಬದವರ ಜೊತೆ ಯಾರಾದರೂ ಮಾತನಾಡಿದರೆ ಅವರಿಗೆ 5 ಸಾವಿರ ದಂಡ ವಿಧಿಸಿದ್ದಾರೆ.


ಹಾಗೇ ಊರಿನ ಜಾತ್ರೆ, ದೇಗುಲಕ್ಕೂ ಪ್ರವೇಶಿಸದಂತೆ ನಿಷೇಧ ಹೇರಿದ್ದಾರೆ. ಅಲ್ಲದೇ ಇದೀಗ ಯೋಧ ಮತ್ತು ಆತನ ಸಹೋದರನ ಮದುವೆಗೆ ಗ್ರಾಮಸ್ಥರು ತಡೆಯೊಡುತ್ತಿದ್ದಾರೆ.  ಈ ಬಗ್ಗೆ ಯೋಧ ವಿಠಲ್ ಅವರು ಮಾಧ್ಯಮದವರೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ