ನಿಖಿಲ್ ಕುಮಾರಸ್ವಾಮಿ ಮಗುವಿನ ಬಗ್ಗೆ ಭವಿಷ್ಯ ನುಡಿದ ವಿನಯ್ ಗುರೂಜಿ

ಭಾನುವಾರ, 4 ಜುಲೈ 2021 (12:02 IST)
ಬೆಂಗಳೂರು: ಜೆಡಿಎಸ್ ಯುವ ನಾಯಕ, ನಟ ನಿಖಿಲ್ ಕುಮಾರಸ್ವಾಮಿ ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಅವರ ಪತ್ನಿ ರೇವತಿ ಗರ್ಭಿಣಿಯಾಗಿದ್ದು, ದೊಡ್ಡ ಗೌಡರ ಮನೆಯಲ್ಲಿ ಸಂಭ್ರಮ ನೆಲೆ ಮಾಡಿದೆ.


ಈ ನಡುವೆ ವಿನಯ್ ಗುರೂಜಿ ನಿಖಿಲ್ ಕುಮಾರಸ್ವಾಮಿ ಮಗುವಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ನಿಖಿಲ್ ಗೆ ಯಾವ ಮಗುವಾಗಲಿದೆ ಎಂದು ಅವರು ಭವಿಷ್ಯ ಹೇಳಿದ್ದಾರೆ.

ನಿಖಿಲ್ ಗೆ ಗಂಡು ಮಗುವಾಗಲಿದೆ. ಆ ಮಗುವಿನ ಆಗಮನದ ನಂತರ ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿದೆ. ಮುಂದೆ ಶಾಸಕನಾಗುವ ಯೋಗವಿದೆ’ ಎಂದು ವಿನಯ್ ಗುರೂಜಿ ಹೇಳಿದ್ದಾರೆ. ಜೆಡಿಎಸ್ ನಾಯಕ ಟಿ ಶರವಣ ನಿವಾಸದಲ್ಲಿ ಕುಮಾರಸ್ವಾಮಿಯವರನ್ನು ಭೇಟಿಯಾಗಿರುವ ವಿನಯ್ ಗುರೂಜಿ ಆಶೀರ್ವಚನ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ