ಬೆಂಗಳೂರು: ಡಿಐಜಿ ರೂಪಾ ಸ್ಪೋಟಕ ವರದಿ ಬಳಿಕ ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಾರೀ ಬದಲಾವಣೆಯಾಗಿದೆ. ಶಶಿಕಲಾ ನಟರಾಜನ್, ಕರೀಂ ಲಾಲ್ ತೆಲಗಿ ಸೇರಿದಂತೆ ಕೆಲವು ಖೈದಿಗಳಿಗೆ ನೀಡುತ್ತಿದ್ದ ವಿಐಪಿ ಆತಿಥ್ಯಕ್ಕೆ ಬ್ರೇಕ್ ಬಿದ್ದಿದೆ.
ಕರೀಂ ಲಾಲ್ ತೆಲಗಿಯ ಪರಿಚಾರಕರ ಸಂಖ್ಯೆ ಕಡಿತಗೊಳಿಸಲಾಗಿದೆ. ಶಶಿಕಲಾ ನಟರಾಜನ್ ಗೆ ನೀಡಿದ್ದ ಪ್ರತ್ಯೇಕ ಅಡಿಗೆ ಮನೆ, ಸ್ಟವ್ ವಾಪಸ್ ಪಡೆಯಲಾಗಿದೆ. ಅಷ್ಟೇ ಅಲ್ಲದೆ, ಕೆಲವು ಖೈದಿಗಳಿಗೆ ಮನೆಯೂಟ ತರಿಸಿಕೊಳ್ಳುತ್ತಿದ್ದ ಸೌಲಭ್ಯಕ್ಕೂ ಕತ್ತರಿ ಹಾಕಲಾಗಿದೆ.
ಪರಪ್ಪನ ಜೈಲಿನಲ್ಲಿ ಶಶಿಕಲಾ ನಟರಾಜನ್, ತೆಲಗಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಹಾಗೂ ಇಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಡಿಐಜಿ ರೂಪಾ ವರದಿ ನೀಡಿದ್ದು, ಭಾರೀ ಕೋಲಾಹಲ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ನಿವೃತ್ತ ಐಎಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖಾ ಸಮಿತಿಯೊಂದು ಜೈಲಿಗೆ ಭೇಟಿ ನೀಡಿತ್ತು. ಇದರ ಬೆನ್ನಲ್ಲೇ ಜೈಲಿನಲ್ಲಿ ಈ ಬದಲಾವಣೆಗಳಾಗಿವೆ.