ಬೆಂಗಳೂರಿನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ್ದ ವ್ಯಕ್ತಿಯ ಕೊಲೆ

ಸೋಮವಾರ, 12 ಡಿಸೆಂಬರ್ 2022 (14:48 IST)
ಅಪ್ರಾಪ್ತೆ ಮೇಲೆ ಆತ್ಯಾಚಾರ ಮಾಡಿದ ಕುಪ್ಪಣ್ಣ ಎಂಬಾತನನ್ನ ಸಂತ್ರಸ್ತ ಬಾಲಕಿ ಕುಟುಂಬಸ್ಥರು ಹೊಡೆದು ಸಾಯಿಸಿದ್ದಾರೆ.ತಡರಾತ್ರಿ ಹೆಣ್ಣೂರಿನ ಬಾಬುಸಾಪಾಳ್ಯದಲ್ಲಿ ಘಟನೆ ನಡೆದಿದ್ದು,16 ವರ್ಷದ ಬಾಲಕಿಯನ್ನು ಬಲವಂತವಾಗಿ ಮೃತ ವ್ಯಕ್ತಿ ಅತ್ಯಾಚಾರ ಮಾಡಿದ್ದ.ಈ ವೇಳೆ ಕಣ್ಣೀರು ಹಾಕುತ್ತ ವಿಚಾರವನ್ನು ಮನೆಯವರಿಗೆ  ಸಂತ್ರಸ್ಥ ಬಾಲಕಿ ತಿಳಿಸಿದ್ದಾಳೆ.ತಕ್ಷಣವೇ ಆರೋಪಿಯನ್ನು ಕುಟುಂಬಸ್ಥರು ಹುಡುಕಿ ಕೊಲೆ ಮಾಡಿದ್ದಾರೆ.
 
ಬಾಬುಸಾಪಾಳ್ಯದ ಮನೆಯಲ್ಲಿ ಕುಪ್ಪಣ್ಣ ಇರೋದ್ರ ಮಾಹಿತಿ ಸಿಕ್ಕಿದ್ದು,ಈ ವೇಳೆ ಮೂವರು ಆರೋಪಿಗಳು ಮನೆಯಲ್ಲೇ ಕುಪ್ಪಣ್ಣನ ಹೊಡೆದು ಸಾಯಿಸಿದ್ದಾರೆ.ಸದ್ಯ ಮೂವರನ್ನ ಹೆಣ್ಣೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎರಡು ಕೇಸ್ ಗಳು ದಾಖಲಾಗಿದ್ದು
 
ಕುಪ್ಪಣ್ಣ ಮೇಲೆ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿದ್ದು,ಸಂತ್ರಸ್ಥ ಬಾಲಕಿ ಮನೆಯವರ ಮೇಲೆ ಕೊಲೆ ಕೇಸ್ ದಾಖಲಾಗಿದೆ ಎಂದು ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದ್ದಾರೆ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ