ಸಾಹಸ ಸಿಂಹ ವಿಷ್ಣುವರ್ಧನ್ ಇದ್ದಿದ್ದರೆ ‘ಇದನ್ನು’ ನೋಡಿ ಎಷ್ಟು ಬೇಸರಪಟ್ಟುಕೊಳ್ಳುತ್ತಿದ್ದರೋ…!
ಚಾಮರಾಜ ಪೇಟೆಯ 4 ನೇ ಮುಖ್ಯರಸ್ತೆಯಲ್ಲಿರುವ ಮಾಡೆಡಲ್ ಸ್ಕೂಲ್ ಎಜುಕೇಷನ್ ಸೊಸೈಟಿಯ ಪ್ರೌಢಶಾಲೆಯ ದುಃಸ್ಥಿತಿ ಇದು. 6 ರಿಂದ 8 ರವರೆಗೆ ತರಗತಿಗಳಲ್ಲಿ ಸುಮಾರು 80 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಇದೀಗ ಅವರನ್ನೆಲ್ಲಾ ಸಮೀಪದ ಶಾಲೆಗೆ ವರ್ಗಾಯಿಸಲಾಗಿದೆ.
ಕನ್ನಡ ಶಾಲೆಗಳ ಮೇಲೆ ಸರ್ಕಾರವೇ ಈ ರೀತಿ ಉದಾಸೀನ ಧೋರಣೆ ತಾಳುತ್ತಿರುವುದು ವಿಪರ್ಯಾಸ. ಇದೀಗ 1 ರಿಂದ 7 ರವರೆಗೆ ತರಗತಿಗಳಿವೆ. ಮುಂದಿನ ದಿನಗಳಲ್ಲಿ ಅದಕ್ಕೂ ಬೀಗ ಬೀಳಬಹುದು ಎಂದು ಶಾಲಾ ಆಡಳಿತ ಮಂಡಳಿ ಭೀತಿಯಲ್ಲಿದೆ.