ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ಸಿಎಂ ಭೇಟಿ: ನೆರವಿನ ಭರವಸೆ
ಬುಧವಾರ, 17 ಅಕ್ಟೋಬರ್ 2018 (13:17 IST)
ಸುಮ್ಮನೆ ಮಾತನಾಡಿ ಹೋಗುವುದಕ್ಕೆ ನಾನಿಲ್ಲಿ ಬಂದಿಲ್ಲ. ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತೇನೆ. ಹೀಗಂತ ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ಜನರಿಗೆ ಸಿಎಂ ಭರವಸೆ ನೀಡಿದ್ದಾರೆ.
ನಾನು ಇಲ್ಲಿಗೆ ಸುಮ್ಮನೇ ಮಾತನಾಡಿ ಹೋಗೊದಕ್ಕೆ ಬಂದಿಲ್ಲ. ಇಲ್ಲಿನ ಸಮಸ್ಯೆಗಳನ್ನು ನಾನು ಕೇಳುತ್ತಿದ್ದೇನೆ. ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತೇನೆ. ಹೀಗಂತ ಕೊಡಗು ಜಿಲ್ಲೆಯ ಜನರಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಧೈರ್ಯ ತುಂಬಿದ್ದಾರೆ.
ಕೊಡಗು ಜಿಲ್ಲೆ ಪ್ರವಾಸದಿಂದ ಬರುವ ಆದಾಯಕ್ಕೆ ಬಹಳಷ್ಟು ನಷ್ಟವಾಗಿದೆ. ಪ್ರವಾಸೋದ್ಯಮ ಕುಂಠಿತವಾಗಿ ಜಿಲ್ಲೆಯ ಅಭಿವೃದ್ಧಿಗೆ ಸಮಸ್ಯೆ ಯಾಗಿದೆ. ಆಸ್ತಿ, ಮನೆಗಳು ನಷ್ಟವಾಗಿದೆ. ಜೀವನ ನಡೆಸಲು ಕಷ್ಟವಾಗಿದೆ. ಶಾಲೆ ಮಕ್ಕಳಿಗೆ ತೊಂದರೆಯಾಗಿದೆ. ಎಲ್ಲವನ್ನು ಸರ್ಕಾರದ ವತಿಯಿಂದ ಸರಿ ಮಾಡುತ್ತೇವೆ ಎಂದರು.
ಮಳೆಯಿಂದಾದ ಪ್ರವಾಹಕ್ಕೆ ನಲುಗಿದ ನಿರಾಶ್ರಿತರಿಗೆ ಸಿಎಂ ಭರವಸೆ ನೀಡಿದರು.