ಅನರ್ಹರೆಂಬ ಆಪಾದನೆಯನ್ನು ಮತದಾರರು ತೊಡೆದುಹಾಕಿದ್ದಾರೆ- ಶ್ರೀಮಂತ ಪಾಟೀಲ್
ಸೋಮವಾರ, 9 ಡಿಸೆಂಬರ್ 2019 (12:05 IST)
ಬೆಂಗಳೂರು : ಕಾಗಾವಾಡ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಶ್ರೀಮಂತ ಪಾಟೀಲ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ ನಮ್ಮ ಮೇಲೆ ಅನರ್ಹರೆಂಬ ಭಾರೀ ದೊಡ್ಡ ಆಪಾದನೆ ಇತ್ತು, ಇದನ್ನು ಮತದಾರರು ತೊಡೆದುಹಾಕಿದ್ದಾರೆ. ಜನರ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು ಎಂದು ಹೇಳಿದ್ದಾರೆ.
ಮತದಾರರ ತೀರ್ಪಿನ ಬಳಿಕ ಯಾರಿಗೂ ಮಾತನಾಡುವ ಅಧಿಕಾರ ಇಲ್ಲ. ನಾವು ದುಡ್ಡಿಗಾಗಿ ಬಿಜೆಪಿಗೆ ಹೋಗಿಲ್ಲ, ಕ್ಷೇತ್ರದ ಅಭಿವೃದ್ಧಿಗಾಗಿ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ನಮ್ಮದು ಪಕ್ಷಾಂತರವಲ್ಲ, ಹೋರಾಟ ಎಂದು ಅವರು ತಿಳಿಸಿದ್ದಾರೆ.