ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023ರ ಸಂಬಂಧ ಮಾನ್ಯ ಚುನಾವಣಾ ಆಯೋಗ ರವರ ಆದೇಶದ ಮೇರೆಗೆ ಮತದಾರರಲ್ಲಿ ಮತದಾನದ ಬಗ್ಗೆ ಅರಿವು/ಜಾಗೃತಿ ಮೂಡಿಸಲು ಹಲವಾರು ಮತದಾನ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಅದರ ಭಾಗವಾಗಿ ಇಂದು ಬಿ.ಎಂ.ಟಿ.ಸಿ ಬಸ್ ನಿಲ್ದಾಣ, ಶಾಂತಿನಗರ ಮತ್ತು ವಿಲ್ಸನ್ ಗಾರ್ಡನ್‌ನ ಮುಖ್ಯರಸ್ತೆಗಳಲ್ಲಿ ಮತದಾನ ಜಾಗೃತಿ ಜಾಥಾ ಹಾಗೂ ಬೀದಿ ನಾಟಕವನ್ನು ನಡೆಸಲಾಯಿತು.
ಚುನಾವಣಾ ಅಕ್ರಮಗಳ ಬಗ್ಗೆ C-VIGIL ತಂತ್ರಾಶದ ಮೂಲಕ ದೂರು ದಾಖಲಿಸಿದರೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಎಲ್ಲರೂ ವಿದ್ಯಾವಂತರಾಗಿದ್ದು, ಸಮಾಜದ ಒಳಿತಿಗಾಗಿ ಉತ್ತಮ ಅಭ್ಯರ್ಥಿಗೆ ಮತಚಾಯಿಸಿ ಎಂದು ಮನವಿ ಮಾಡಿದರು.
ಈ ವೇಳೆ ಬಿ.ಎಂ.ಟಿ.ಸಿಯ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ, ಬಿಎಂಟಿಸಿ ಐಟಿ ನಿರ್ದೇಶಕರಾದ ಸೂರ್ಯಸೇನ್, ದಕ್ಷಿಣ ವಲಯದ ಉಪ ಆಯುಕ್ತರಾದ ಲಕ್ಷ್ಮೀದೇವಿ, ನೋಡಲ್ ಅಧಿಕಾರಿಯಾದ ಸುರೇಶ್, ಬಿಎಂಟಿಸಿಯ ಅಧಿಕಾರಿ/ಸಿಬ್ಬಂದಿಗಳು, ಪೌರಕಾರ್ಮಿಕರು, ಕಂದಾಯ ಅಧಿಕಾರಿಗಳು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.