ಹೂವಿನ ಮೂಲಕ ಮತದಾನ ಜಾಗೃತಿ

ಸೋಮವಾರ, 1 ಏಪ್ರಿಲ್ 2019 (17:18 IST)
ಹೂವಿನ ಮೂಲಕ ಜನರಲ್ಲಿ ಮತದಾನ ಜಾಗೃತಿಯನ್ನು ವಿಶೇಷವಾಗಿ ಮೂಡಿಸಲಾಗಿದೆ.

ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಮತದಾನ ಮಾಡುವಂತೆ ಪ್ರೇರೆಪಿಸುವಂತೆ ಪ್ರೇರೆಪಿಸುವ ಉದ್ದೇಶದಿಂದ ಚುನಾವಣೆ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಫಲಪುಷ್ಪ ಪ್ರದರ್ಶನ, ಮತಯಂತ್ರ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.

ಈ ವೇಳೆ ಸಾರ್ವಜನಿಕರು, ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳು ಭಾಗಿಯಾಗಿ ಮತದಾನದ ಮಹತ್ವವನ್ನು ಹೂಗಳ ಮೂಲಕ ಅರಿತರು.  ಹದಿನೈದು ಸಾವಿರ ಕಾರ್ನೇಷಿಯನ್, ಹದಿನೈದ ಸಾವಿರ ಗುಲಾಬಿ ಹಾಗೂ ಐದು ಸಾವಿರ ಕ್ರಜ್ಯಾಂತಮಮ್ ಹೂಗಳ ಬಳಸಿ ಕರ್ನಾಟಕ ನಕ್ಷೆ, ಮತಯಂತ್ರ, ಬ್ಯಾಲೆಟ್, ವಿವಿಪ್ಯಾಟ್ ಯಂತ್ರಗಳು ಹಾಗೂ ಭಾರತ ಚುನಾವಣಾ ಆಯೋಗದ ಲಾಂಛನಗಳನ್ನು ನಿರ್ಮಿಸುವ ಮೂಲಕ ಪ್ರದರ್ಶನಕ್ಕೆ ಇಡಲಾಗಿತ್ತು. ಆ ಮೂಲಕ ಮತದಾನದ ಜಾಗೃತಿ ಮೂಡಿಸಲಾಯಿತು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ