ಮತದಾನ ಜಾಗೃತಿಯ ಬಗ್ಗೆ ನೀವು ಮಾಡಿದ ಮನವಿ ಲೇಟ್ ಆಗಿಲ್ವಾ- ಮತ್ತೆ ಪ್ರಧಾನಿ ಮೋದಿ ಕಾಲೆಳೆದ ರಮ್ಯಾ

ಗುರುವಾರ, 14 ಮಾರ್ಚ್ 2019 (06:53 IST)
ಬೆಂಗಳೂರು : ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷೆ ರಮ್ಯಾ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ವಿಚಾರದ ಬಗ್ಗೆ ಪ್ರಧಾನಿ ಮೋದಿ ಅವರು ಮಾಡಿದ ಮನವಿ ಕುರಿತು ಲೇವಡಿ ಮಾಡಿದ್ದಾರೆ.


ಮೋದಿ ಅವರು ಸಿನಿಮಾ ತಾರೆಯರು, ಕ್ರೀಡಾಪಟುಗಳು, ರಾಜಕೀಯ ಗಣ್ಯರುಗಳು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಸಾಧಕರಿಗೆ ಟ್ವೀಟ್ ಮಾಡಿ, ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಎಂದು ಮನವಿ ಮಾಡಿದ್ದಾರೆ.


ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ಯಾಗ್ ಆಗಿರುವ ಮೋದಿ ಅವರ ಟ್ವೀಟ್ ಅನ್ನು ರೀ-ಟ್ವೀಟ್ ಮಾಡಿದ ರಮ್ಯ,’ ನೀವು ಈಗ ಮಾಡುತ್ತಿರುವ ಕೆಲಸವನ್ನು ನಾವು ಮೊದಲೇ ಮಾಡಿದ್ದೇವೆ, ಇದನ್ನ ನಾವು ಚುನಾವಣೆಯ ದಿನಾಂಕ ಘೋಷಣೆಯಾದ ದಿನದಿಂದಲೇ ಮಾಡುತ್ತಿದ್ದೇವೆ #RegisterToVote. ಇದನ್ನೊಮ್ಮೆ ನೋಡಿ, ಮತದಾನಕ್ಕೆ ಮನವಿ ಮಾಡುತ್ತಿರೋದು ತಡವಾಯ್ತು ಅಂತ ನಿಮಗೆ ಅನಿಸುತ್ತಿಲ್ವಾ. ಹಾಗೆಯೇ ರಾಹುಲ್ ಗಾಂಧಿ ಅವರು ಸ್ಟೆಲ್ಲಾ ಮೇರಿಸ್ ವಿದ್ಯಾರ್ಥಿಗಳ ಜೊತೆ ಮಾಡಿರುವ ಸಂವಾದ ಕಾರ್ಯಕ್ರಮ ಕೂಡ ಯಶಸ್ವಿಯಾಗಿದೆ. #VanakkamRahulGandhi ಎಂದು ಬರೆದು ಮೋದಿ ಅವರನ್ನು ಲೇವಡಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ