ಐಟಿ-ಬಿಟಿ ಕಂಪನಿಗಳಿಂದ ಸಿಎಂಗೆ ಎಚ್ಚರಿಕೆ ಪತ್ರ

ಭಾನುವಾರ, 4 ಸೆಪ್ಟಂಬರ್ 2022 (11:13 IST)
ಬೆಂಗಳೂರು : ಕಳೆದ ವಾರ ಸುರಿದ ಮಳೆಯಿಂದ `ಬ್ರ್ಯಾಂಡ್ ಬೆಂಗಳೂರು’ ಹೆಸರು ಸಹ ನೀರಿನಲ್ಲಿ ಕೊಚ್ಚಿ ಹೋಗ್ತಿದೆ. ಐಟಿ-ಬಿಟಿ ಸಿಟಿ ಎಂದೇ ಹೆಸರಾದ ಬೆಂಗಳೂರಿಗೆ ಐಟಿ ಕಂಪನಿಗಳು ವಲಸೆ ಎಚ್ಚರಿಕೆ ನೀಡಿ ಶಾಕ್ ಕೊಟ್ಟಿವೆ.

ಹೌದು. ಬೆಂಗಳೂರು ಅಂದ್ರೆ ಐಟಿ-ಬಿಟಿ ಹಬ್ ಎಂದೇ ಖ್ಯಾತಿ. ಆದರೀಗ ಒಂದು ದಿನದ ಮಳೆಗೆ ಬ್ರಾ್ಯಂಡ್ ಬೆಂಗಳೂರು ಹೆಸರೇ ಬರ್ಬಾದ್ ಆಗ್ತಿದ್ದು, ಬೆಂಗಳೂರಿನಿಂದ ಐಟಿ ಕಂಪನಿಗಳು ವಲಸೆ ಹೋಗುವ ಎಚ್ಚರಿಕೆ ನೀಡಿವೆ. ಹೊರವರ್ತುಲ ರಸ್ತೆ ಕಂಪನಿಗಳ ಅಸೋಸಿಯೇಷನ್ ಖುದ್ದು ಈ ಬಗ್ಗೆ ಸಿಎಂಗೆ ಪತ್ರ ಬರೆದಿದೆ. 

ಕಳೆದ ವಾರ ಸತತ ಮರ್ನಾಲ್ಕು ದಿನ ಸುರಿದ ಮಹಾಮಳೆಗೆ ಐಟಿ ಕಂಪನಿಗಳು ಭಾರೀ ನಷ್ಟ ಅನುಭವಿಸಿವೆ. ಅದ್ರಲ್ಲೂ ಆಗಸ್ಟ್ 30 ರಂದು ಸುರಿದ ಮಳೆಯಿಂದಾಗಿ 5 ಗಂಟೆ ಹೊರವರ್ತುಲದ ರಸ್ತೆಯಲ್ಲಿ ಟೆಕ್ಕಿಗಳು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿದ್ರು.

ಐಟಿ ಕಂಪನಿಗಳ ಒಳಭಾಗಕ್ಕೆಲ್ಲಾ ನೀರು ನುಗ್ಗಿತ್ತು. ಇವೆಲ್ಲದರ ಪರಿಣಾಮ 255 ಕೋಟಿ ರೂ ನಷ್ಟವಾಗಿದೆ. ಈ ಹೊರವರ್ತುಲ ರಸ್ತೆಯ ಕಳಪೆ ಕಾಮಗಾರಿ ನಿರ್ವಹಣೆ ಮೂಲ ಸೌಕರ್ಯಗಳ ಕೊರತೆ, ಮಳೆ ಬಂದಾಗ ಆಗುವ ಅವಾಂತರದಿಂದ ಕಂಪನಿಗಳಿಗೆ ಭಾರೀ ನಷ್ಟವಾಗಿದೆ. 

ಸಂಚಾರ ದಟ್ಟಣೆ ನಿರ್ವಹಣೆಗೆ ತೆಗೆದುಕೊಂಡ ಕ್ರಮ ಯಾವುದು? ದೀರ್ಘಕಾಲಿಕ, ತಾತ್ಕಾಲಿಕವಾಗಿ ಯಾವ ರೀತಿಯ ಕ್ರಮಗಳು ಆಗಿದೆ ಅಂತಾ ಪ್ರಶ್ನಿಸಿ ಪತ್ರ ಬರೆದಿದ್ದಾರೆ. ಅಲ್ಲದೇ ಐಟಿ ಕಂಪನಿಗಳು ಅನಿವಾರ್ಯವಾಗಿ ಬೇರೆ ಕಡೆ ವಲಸೆ ಹೋಗಬೇಕಾಗುತ್ತದೆ. ಜೊತೆಗೆ ತಮ್ಮ ಹೂಡಿಕೆಗಳನ್ನು ವಾಪಸ್ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ