ವಾರಿಯರ್ಸ್ ಮೃತಪಟ್ಟರೆ ಹುತಾತ್ಮರೆನ್ನಬೇಕು- ಡಾ.ಮಂಜುನಾಥ್ ಹೇಳಿಕೆ

ಶನಿವಾರ, 17 ಅಕ್ಟೋಬರ್ 2020 (10:30 IST)
ಮೈಸೂರು : ದಸರಾ ಉದ್ಘಾಟನೆ ಮಾಡಿದ್ದು ನನ್ನ ಪುಣ್ಯ ಎಂದು  ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಮಂಜುನಾಥ್ ಹೇಳಿದ್ದಾರೆ.

ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಡಾ.ಮಂಜುನಾಥ್ ಅವರು, ಮೊದಲ ಬಾರಿಗೆ ವೈದ್ಯರಿಗೆ ದಸರಾ ಉದ್ಘಾಟನೆ ಭಾಗ್ಯ ಸಿಕ್ಕಿದೆ. ನಮಗೆ ಅವಕಾಶ ನೀಡಿದ್ದಕ್ಕೆ ಸಿಎಂಗೆ ಧನ್ಯವಾದ. ಇದು ವಾರಿಯರ್ಸ್ ಗೆ ಕೊಟ್ಟ ದೊಡ್ಡ ಗೌರವ. ನನ್ನ ಜೀವಿತಾವಧಿಯಲ್ಲಿ ಮರೆಯಲಾರದ ಕ್ಷಣ. ಇಡೀ ದೇಶ ಕೊರೊನಾದಿಂದ ಮುಕ್ತವಾಗಲಿ. ಆದಷ್ಟು ಬೇಗ ಕೊರೊನಾಗೆ ಲಸಿಕೆ ಸಿಗಲಿ. ದಸರಾದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ. ವಾರಿಯರ್ಸ್  ಮೃತಪಟ್ಟರೆ ಹುತಾತ್ಮರೆನ್ನಬೇಕು ಎಂದು ಹೇಳಿದ್ದಾರೆ.

ಹಾಗೇ ಕೊರೊನಾಗೆ ಈ ವರ್ಷ ಲಸಿಕೆ ಸಿಗಲ್ಲ. ಫ್ರೆಬ್ರವರಿ , ಜೂನ್ ವೇಳೆ ಲಸಿಕೆ ಸಿಗುವ ಸಾಧ್ಯತೆ. 3ನೇ ಹಂತದಲ್ಲಿ ಲಸಿಕೆ ಪ್ರಯೋಗ ನಡೆಯುತ್ತಿದೆ. ಕಾಲ ಬದಲಾಗಿಲ್ಲ, ಜನ ಬದಲಾಗಿದ್ದಾರೆ. ಜೀವನ ಶೈಲಿ ಬದಲಾಗಿದೆ. ಸೋಂಕಿತರನ್ನು ಬೇರೆ ರೀತಿ ನೋಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ