ಯಶೋಮಾರ್ಗಕ್ಕೆ ಒಲಿದ ಗಂಗೆ.. ಬರದ ನಾಡಲ್ಲಿ ಭಗೀರಥನಾದ ರಾಕಿಂಗ್ ಸ್ಟಾರ್

ಮಂಗಳವಾರ, 28 ಮಾರ್ಚ್ 2017 (12:18 IST)
ರಾಕಿಂಗ್ ಸ್ಟಾರ್ ಯಶ್ ಬರದಿಂದ ತತ್ತರಿಸುತ್ತಿದ್ದ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಮೂಲಕ ಜನಸೇವೆ ಮಾಡಿದ್ದ ಬಗ್ಗೆ ಕೇಳಿದ್ವಿ. ಇದೀಗ, ಯಶ್ ಒಂದು ಕೆರೆ ಹೂಳೆತ್ತುವ ಮೂಲಕ ರೈತರ ಕೃಷಿಗೂ ನೆರವಾಗುವ ಕೆಲಸಕ್ಕೂ ಚಾಲನೆ ನೀಡಿದ್ದರು. ಒಳ್ಳೆಯ ಕೆಲಸ ಮಾಡುವವರಿಗೆ ದೈವ ಬಲವಿರುತ್ತದೆ ಎಂಬ ಮಾತು ಇಲ್ಲಿ ನಿಜವಾಗಿದೆ. ಯಶ್ ಕೈಗುಣ ಎಂಬಂತೆ ಕೆರೆ ಹೂಳೆತ್ತುವ ಸಂದರ್ಭ 8 ಅಡಿಯಲ್ಲೇ ಜಲ ಉಕ್ಕಿದ್ದು, ಗ್ರಾಮಸ್ಥರಿಗೆ ಸಂತಸ ತಂದಿದೆ.

ರಾಜ್ಯಾದ್ಯಂತ ಬರ ಕಾಡುತ್ತಿರುವ ಈ ಸಂದರ್ಭದಲ್ಲಿ ನೂರಾರು ಅಡಿ ಕೊರೆದರೂ ಒಂದನಿ ನೀರು ಸಿಗುತ್ತಿಲ್ಲ. ಅದರೆ, ಇಲ್ಲಿ ಎಂಟೇ ಅಡಿ ಗಂಗಾ ಮಾತೆ ಒಲಿದಿದ್ದಾಳೆ.

ಯಶೋಮಾರ್ಗಕ್ಕೆ ಒಲಿದ ಗಂಗೆ: ಕೊಪ್ಪಳ ಜಿಲ್ಲೆಯ ತಲ್ಲೂರಿನ 96 ಎಕರೆ ಪ್ರದೇಶದ ಕೆರೆಯ ಹೂಳೆತ್ತುವ ಕಾರ್ಯವನ್ನ ಯಶ್ ಅವರು ತಮ್ಮ ಯಶೋಮಾರ್ಗ ಫೌಂಡೇಶನ್ ಕೈಗೆತ್ತುಕೊಂಡಿದ್ದರು. ಫೆಬ್ರವರಿ 28ರಂದು ಪತ್ನಿ ರಾಧಿಕಾ ಪಂಡಿತ್ ಜೊತೆ ಆಗಮಿಸಿದ್ದ ಯಶ್, 4 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದ್ದರು.

ಇದೀಗ, ಈ ಹೂಳೆತ್ತಿದ್ದ ಜಾಗದಲ್ಲಿ ನೀರು ಜಿನುಗಿದ್ದು, ನಟ ಯಶ್ ಈ ಗ್ರಾಮಕ್ಕೆ ಅಕ್ಷರಶಃ ಭಗೀರಥರಾಗಿದ್ದಾರೆ.

 

ವೆಬ್ದುನಿಯಾವನ್ನು ಓದಿ