ಪಕ್ಷದ ವಿಚಾರ ಅಂತಾ ಬಂದ್ರೆ ನಾವೆಲ್ಲರೂ ಒಂದೇ: ಪ್ರಿಯಾಂಕ್ ಖರ್ಗೆ

Sampriya

ಭಾನುವಾರ, 15 ಫೆಬ್ರವರಿ 2026 (17:02 IST)
ಬೆಂಗಳೂರು: ಶಾಸಕರು ಅವರ ಪಾಡಿಗೆ ವಿದೇಶ ಪ್ರವಾಸ ಮಾಡಿದರೆ ಬೇಡ ಎನ್ನಲೂ ಆಗುತ್ತಾ ಎಂದು  ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. 

ಖಾಸಗಿಯಾಗಿ ಟೂರ್ ಮಾಡೋದು ತಪ್ಪಾ? ನಾವು ಎಲ್ಲೂ ಹೋಗಬಾರದಾ? ಇನ್ನೂ ಪಕ್ಷದ ವಿಚಾರ ಅಂತಾ ಬಂದಾಗ ನಾವೆಲ್ಲರೂ ಒಂದೇ.  ಕಳೆದ ವರ್ಷ ಕೆಲವರು ಹೋಗಿದ್ರು. ಅವತ್ತಿಲ್ಲದ ವಿಚಾರ ಮತ್ತೇ ಈಗ ಯಾಕೆ. ವಿದೇಶಕ್ಕೆ ಹೋಗುವವರನ್ನು ತಡೆಯಲು ಸಾಧ್ಯವೇ ಅಂತ ಶಾಸಕರ ಟೂರ್ ವಿಚಾರ ಸಂಬಂಧ ಸಮರ್ಥನೆ ನೀಡಿದರು. 

ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಗೊಂದಲದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರ ಒಳ ಜಗಳದ ವಿಚಾರ ಮುಚ್ಚಿಡಲು ನಮ್ಮ ಮೇಲೆ ಬೆರಳು ತೋರಿಸುತ್ತಿದ್ದಾರೆ. ನಮ್ಮಲ್ಲಿ ಗೊಂದಲ ಇಲ್ಲ.  ಈ ವಿಚಾರ ಸಂಬಂಧ ಹೈಕಮಾಂಡ್ ಕೂಡಾ ಸ್ಪಷ್ಟತೆಯನ್ನು ನೀಡಿದ್ದು, ಖರ್ಗೆಯವರೂ ಈ ವಿಚಾರವಾಗಿ ಸ್ಪಷ್ಟನೆ ಮಾಡಿದ್ದಾರೆ‌. ಇನ್ನು ಗೊಂದಲ ಎಲ್ಲಿದೆ? ನಮ್ಮಲ್ಲಿ ಯಾವುದೇ ಗೊಂದಲ ‌ಇಲ್ಲ ಅಂತ ತಿಳಿಸಿದರು. 

ನಮ್ಮ ಸರ್ಕಾರ ಜನರಿಗೆ ಒಳ್ಳೇದನ್ನ ಮಾಡ್ತಿದೆ. ಅದನ್ನೂ ಸಹಿಸಲಾಗುತ್ತಿಲ್ಲ. ಜನ ಇವರಿಗೆ ವೋಟ್ ಮಾಡಲ್ಲ ಅನ್ನೋದು ಇವರಿಗೆ ಗೊತ್ತಾಗಿದೆ. ಅದಕ್ಕೆ ವಿರೋಧ ಮಾಡಿ ಮಾತಾಡ್ತಾರೆ ಅಂತ ಬಿಜೆಪಿ ವಿರುದ್ದ ಕಿಡಿಕಾರಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ