ನಾವು ಬಿಕ್ಷುಕರಲ್ಲಾ ನಮ್ಮ ಮೀಸಲಾತಿ ನಮಗೆ ಕೊಡಿ ಡಿಕೆಶಿ ಆಕ್ರೋಶ..!

ಭಾನುವಾರ, 26 ಮಾರ್ಚ್ 2023 (19:58 IST)
ಚುನಾವಣೆ ಹತ್ತಿರವಾಗ್ತಿದ್ದಂತೆ ಮೀಸಲಾತಿ ವಿಚಾರ ಸಾಕಷ್ಟು ಕಾವು ಪಡೆಯುತ್ತಿದೆ.‌ಮೀಸಲಾತಿ ವಿಚಾರವಾಗಿ ಬಿಜೆಪಿ ಸರ್ಕಾರ ತೆಗೆದಕೊಂಡಿರುವ ನಿರ್ಧಾರಕ್ಕೆ ಬಿಜೆಪಿ ಸರ್ಕಾರ ನಾಟಕವಾಡ್ತಿದೆ ಅಂತ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ರು..ಮೀಸಲಾತಿ ವಿಚಾರವಾಗಿ ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ಅನ್ಯಾಯ ಮಾಡ್ತಿದೆ ಅಂತಾ ಇವತ್ತು ಕೈ ಪಡೆಯ ನಾಯಕರು ಜಂಟಿಸುದ್ದಿಗೋಷ್ಟಿ ನಡೆಸಿದ್ರು. ಚುನಾವಣೆ ಹತ್ತಿರ ಬರ್ತಿದ್ದಂತೆ ನಾಯಕರ ಆರೋಪ ಪ್ರತ್ಯಾರೋಪಗಳು ಹೆಚ್ಚಾಗ್ತಿವಿ. ಅದ್ರಲ್ಲೂ ಮೀಸಲಾತಿ ವಿಚಾರದಲ್ಲಿ ಆಢಳಿತ ಪಕ್ಷ ಹಾಗೂ  ವಿಪಕ್ಷಗಳ ನಡುವೆ ಹಗ್ಗಜಗ್ಗಟ ಹೆಚ್ಚಾಗ್ತನೆ ಇದೆ. ಮೀಸಲಾತಿ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ದ ಕಿಡಿಕಾರುತ್ತಿದ್ದಾರೆ. ಮೀಸಲಾತಿ ವಿಚಾರವಾಗಿ ಕೈ ನಾಯಕರು ಇಂದು ಜಂಟಿಸುದ್ದಿಗೋಷ್ಟಿ ನಡೆಸಿ ಸರ್ಕಾರದ ವಿರುದ್ದ ಹರಿಹಾಯ್ದರು

ಸರ್ಕಾರದ ನಿರ್ಧಾರದ ವಿರುದ್ದ ಕಿಡಿಕಾರಿದ ಡಿಕೆಶಿ  ಹಿಂದುಳಿದವರು, ಅಲ್ಪಸಂಖ್ಯಾತರು, ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ ಪಂಗಡದವರು  ಭಿಕ್ಷುಕರಲ್ಲ. ಪ್ರತಿಯೊಬ್ಬರು ಅವರ  ಹಕ್ಕನ್ನ ಜನಸಂಖ್ಯೆಗಳಿಗೆ ಅನುಗುಣವಾಗಿ ಕೇಳುತ್ತಿದ್ದಾರೆ.  ನಾಗಮೋಹನ್ ದಾಸ್ ಅವರ ಸಮಿತಿಯು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಶಿಫಾರಸ್ಸು ಮಾಡಿದೆ. ಈ ವರದಿಯನ್ನು ನಾಲ್ಕು ವರ್ಷಗಳ ಕಾಲ ಜಾರಿ ಮಾಡದೇ, ನಾವು ಧ್ವನಿ ಎತ್ತಿದ ನಂತರ ಹೆಚ್ಚಳ ಮಾಡುವ ಕಾನೂನು ಮಾಡಿ ಇದನ್ನು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿಲ್ಲ. ಇದರ ಬಗ್ಗೆ ನಾವು ಹೋರಾಟಕ್ಕೆ ಮುಂದಾದ ನಂತರ ಅವರು ಕೇಂದ್ರಕ್ಕೆ ಪತ್ರ ಬರೆಯುವ ನಾಟಕವಾಡಿದ್ದಾರೆ. ಇನ್ನೂ ಮೃತ್ಯುಂಜಯ ಸ್ವಾಮೀಜಿಗಳು, ನಿರ್ಮಲಾನಂದ ಸ್ವಾಮೀಜಿಗಳಿಗೆ ಸರ್ಕಾರದವರು 20-25 ಬಾರಿ ಕರೆ ಮಾಡಿ ಇದನ್ನು ಒಪ್ಪಿಕೊಳ್ಳಿ ಎಂದು ಕೇಳುತ್ತಿದ್ದಾರೆ ಅಂತ ಡಿಕೆಶಿ ಸರ್ಕಾರದ ವಿರುದ್ದ ಆರೋಪ ಮಾಡಿದ್ರು
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ