ಫೇಕ್ ನ್ಯೂಸ್ ತಡೆಯಲು ಕಾನೂನು ತರುತ್ತಿದ್ದೇವೆ-ಡಿಸಿಎಂ ಡಿಕೆಶಿವಕುಮಾರ್

ಭಾನುವಾರ, 27 ಆಗಸ್ಟ್ 2023 (15:00 IST)
ಫೇಕ್ ನ್ಯೂಸ್ ತಡೆಯಲು ಕಾನೂನು ತರುತ್ತಿದ್ದೇವೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.ಸದಾಶಿವನಗರದಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಡಿಸಿಎಂ ಡಿಕೆಶಿವಕುಮಾರ್ ಭೇಟಿ ಮಾಡಿ ಸರ್ಕಾರದ ಹಲವು ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಿದರು‌.ನಂತರ ಮಾತನಾಡಿದ ಡಿಕೆಶಿವಕುಮಾರ್ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟ ವಿಚಾರವಾಗಿ ಚರ್ಚೆ ಮಾಡಿದ್ವಿ.ಬೆಂಗಳೂರಿನ ಒಂದಷ್ಟು ಕಾರ್ಯಕ್ರಮ ಬಗ್ಗೆ ಚರ್ಚೆ ‌ಮಾಡಿದ್ವಿ. ಬೆಂಗಳೂರಿನಲ್ಲಿ ವೈಪೈ ಜೋನ್ ಮಾಡ್ತಾ ಇದ್ದೇವೆ. ಫೇಕ್ ನ್ಯೂಸ್ ತಡೆಯಲು ಕಾನೂನು ತರುತ್ತಿದ್ದೇವೆ. ಗೃಹ ಇಲಾಖೆಯಿಂದ ‌ಈ ಕಾನೂನು ಆಗುತ್ತೆ. ಕೆಲ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಕೆಲ ನಾಯಕರ ಬಗ್ಗೆ ತೇಜೋವದೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಕಾನೂನು ತರುತ್ತೇವೆ ಎಂದು ಹೇಳಿದರು.
 
ಇನ್ನೂ ಸರ್ಕಾರಕ್ಕೆ 100 ದಿನಗಳ ಪೂರೈಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಸರ್ಕಾರ ನೂರು ದಿನ ನಿಮ್ಮ ಕಣ್ಣಿಗೆ ಕಾಣುತ್ತಿದೆ.ಐದು ಗ್ಯಾರಂಟಿ ಜಾರಿ ತಂದಿದ್ದೇವೆ.ಯಾವ ಸರ್ಕಾರವು ದೇಶದಲ್ಲಿ ಮಾಡಿಲ್ಲ. ಇದಕ್ಕಿಂತ ಏನು ಬೇಕು.ಗೃಹಲಕ್ಷ್ಮಿ ಯೋಜನೆ ಜಾರಿ‌ ಮಾಡುತ್ತಿದ್ದೇವೆ.ಶಕ್ತಿ, ಗೃಹಜ್ಯೋತಿ,ಅನ್ನಭಾಗ್ಯ ಯೋಜನೆ ಜಾರಿಯಾಗಿದೆ.ಯುವನಿಧಿ ಡಿಸೆಂಬರ್ ಗೆ ಜಾರಿ‌ ಮಾಡುತ್ತೇವೆ.ಇದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ.ಕಾಂಗ್ರೆಸ್ ‌ಕೊಟ್ಟ ಭರವಸೆ ಈಡೇರಿಸಿದೆ. ಸರ್ಕಾರಕ್ಕೆ ಸೆಂಚುರಿ ಆಗಿದೆ.ಹಾಫ್ ಸೆಂಚುರಿ ಅಲ್ಲ ಫುಲ್ ಸೆಂಚುರಿ ಆಗಿದೆ ಎಂದು ಸರ್ಕಾರ ನೂರು ದಿನ ಪೂರೈಸಿದಕ್ಕೆ ಸಂಭ್ರಮ ವ್ಯಕ್ತಪಡಿಸಿದರು.
 
೪೦% ಕಮಿಷನ್ ಆರೋಪ ಹಾಗೂ ಕೋವಿಡ್ ಹಗರಣ ತನಿಖೆಗೆ ವಹಿಸಿದ ವಿಚಾರವಾಗಿ ಮಾತನಾಡಿ ಈಗಾಗಲೇ ತನಿಖೆಗೆ ಕೊಟ್ಟಿದ್ದೇವೆ. ನಾನು ಈ ಬಗ್ಗೆ ಮಾತನಾಡಲ್ಲ, ಯಾರು ಮಾತನಾಡಬೇಕೋ ಅವರು ಮಾತನಾಡುತ್ತಾರೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ