ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳಿದ್ದಾರೆ.ಸಾಧಕನಿಗೆ ಸಾವು ಅಂತ್ಯವಲ್ಲ ಸಾವಿನ ನಂತರವೂ ಬದುಕುವವನು ಸಾಧಕ.ಈ ಮಾತು ಸಿದ್ದೇಶ್ವರ ಸ್ವಾಮೀಜಿಗಳಿಗೆ ಅನ್ವಯವಾಗುತ್ತದೆ.ಅವರ ವಿಚಾರ, ತತ್ವ ಸಿದ್ದಾಂತ, ನಡೆ ನುಡಿಯಲ್ಲಿ ಅವರು ಸದಾಕಾಲ ನಮ್ಮೊಂದಿಗೆ ಇರುತ್ತಾರೆ ಎನ್ನುವ ನಂಬಿಕೆ ನನಗಿದೆ.ಮುಂದಿನ ಜನಾಂಗ ಸಿದ್ದೇಶ್ವರ ಗುರುಗಳನ್ನು ನೆನೆಸಿಕೊಳ್ಳುತ್ತದೆ. ಸಿದ್ದೇಶ್ವರ ಸ್ವಾಮೀಜಿ ಅವರ ಕಾಲದಲ್ಲಿ ನಾವಿದ್ದೇವು ಎನ್ನುವುದು ಭಾಗ್ಯ.ಅವರು ಯಾವದೇ ಪಂಥ, ಮತ ಪಾಲಿಸಿದವರಲ್ಲ.ಅವರ ನಡೆ ನುಡಿಯಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ.ಅವರು ಅತ್ಯಂತ ಮೇಲ್ಪಂಕ್ತಿಯ ಸಂತ ಅವರು ಯಾರಿಂದಲೂ ಏನನ್ನೂ ಬೇಡಿಲ್ಲ.ಅಪಾರ ಜ್ಞಾನ ಭಂಡಾರವನ್ನು ಕೊಟ್ಟುಹೋಗಿದ್ದಾರೆ.
ಎಷ್ಟೊ ಜನ ಸಾಯುವ ಮೊದಲೇ ಸಮಾಧಿ ಕಟ್ಟಿಸಿದವರಿದ್ದಾರೆ.ನಾನು ಯಾರ ಬಗ್ಗೆಯೂ ಮಾತನಾಡುತ್ತಿಲ್ಲ ಸಂದರ್ಭ ಹಾಗಿದೆ.ನಾನು ಅವರೊಂದಿಗೆ ಸುಮಾರು 25 ವರ್ಷಗಳಿಂದ ಸಂಪರ್ಕ ಇಟ್ಟುಕೊಂಡಿದ್ದೇನೆ.ಅವರು ಮನುಕುಲದ ಬಗ್ಗೆ ಆದ್ಯಾತ್ಮದ ಬಗ್ಗೆ ಸಾಕಷ್ಟು ಮಾರ್ಗದರ್ಶನ ಮಾಡಿದ್ದಾರೆ.ನನ್ನ ಕ್ಷೇತ್ರದ ಅತ್ತಿಗೆರೆ ಬಗ್ಗೆ ಅಪಾರವಾದ ಪ್ರೀತಿ, ನಾಲ್ಕೈದು ತಿಂಗಳ ಹಿಂದೆ ನಾನು ಭೇಟಿಯಾಗಿದ್ದಾಗ ನಾನು ಅತ್ತಿಗೆರೆಗೆ ಬರುತ್ತೇನೆ ಎಂದು ಹೇಳಿದರು.ಅಪಾರ ಸಂಖ್ಯೆಯ ಭಕ್ತರು ಅವರ ಭಾಷಣ ಕೇಳಿದ್ದಾರೆ.ಅವರಿಗೆ ಅಪಾರ ದುಖಃವಾಗಿದೆ.
ನಾನು ಭಕ್ತರಲ್ಲಿ ಕೈ ಮುಗಿದು ಕೇಳುತ್ತೇನೆ.ಅವರ ಪ್ರವಚನದಲ್ಲಿ ಎಷ್ಟು ಶಾಂತಿ ಇತ್ತೊ ಅಷ್ಟೆ ಶಾಂತಿ ಸುವ್ಯವಸ್ಥೆಯಿಂದ ಅಂತಿಮ ಯಾತ್ರೆ ಮಾಡೋಣ.ನಾನು ವಿಜಯಪುರಕ್ಕೆ ಹೋದಾಗ ನಗುನಗುತ್ತ ನನ್ನೊಂದಿಗೆ ಮಾತನಾಡಿದ್ದರು.ಪ್ರಧಾನಿಯವರು ದೂರವಾಣಿ ಕರೆ ಮಾಡಿದಾಗಲೂ ಅವರ ಧ್ವನಿ ಗುರುತಿಸಿ ಮಾತನಾಡಿದ್ದರು.ನಾಳೆ ನಾನು ಒಂದೂವರೆಗೆ ವಿಜಯಪುರಕ್ಕೆ ಹೋಗುತ್ತೇನೆ.ಅಂತಿಮ ಯಾತ್ರೆಯಲ್ಲಿಭಾಗ್ಯಗೊಳ್ಳಲಿದ್ದೇನೆ ಎಂದು ಎಂದ ಸಿಎಂ ಬೊಮ್ಮಾಯಿ ಹೇಳಿದಾರೆ.