ಧರ್ಮ ದಂಗಲ್ಗೆ ನಾವು ಕಾರಣರಲ್ಲ ಎಂದ ವಿದ್ಯಾರ್ಥಿನಿಯರು

ಶನಿವಾರ, 16 ಏಪ್ರಿಲ್ 2022 (10:57 IST)
ಬೆಂಗಳೂರು : ನಾವು ಹಿಜಬ್ ಬಗ್ಗೆ ಕೇಳಿದ್ದಕ್ಕೆ ಈ ಧರ್ಮದಂಗಲ್ ಶುರುವಾಯ್ತು ಎಂದು ಆರೋಪಿಸುತ್ತಿದ್ದಾರೆ.

ಆದರೆ  ಧರ್ಮದಂಗಲ್ಗೆ ಕಾರಣ ನಾವಲ್ಲ ಎಂದು ಹಿಜಬ್ ವಿದ್ಯಾರ್ಥಿನಿಯರಾದ ಅಲಿಯಾ, ಅಲ್ಮಾಸ್ ಕಿಡಿಕಾರಿದರು. ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡ್ತಿದ್ದಾರೆ. ಧರ್ಮದಂಗಲ್ ಮೂಲಕ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿದ್ದಾರೆ.

ಒಂದು ಧರ್ಮವನ್ನು ದೂಷಿಸಿ, ಟಾರ್ಗೆಟ್ ಮಾಡಲು ಇಷ್ಟೆಲ್ಲಾ ಮಾಡ್ತಿದ್ದಾರೆ. ನಾವು ಹಿಜಬ್ ಬಿಟ್ಟು ಬೇರೆ ಧರ್ಮದಂಗಲ್ ಬಗ್ಗೆ ಕಾಮೆಂಟ್ ಮಾಡಿಲ್ಲ. ನಾವು ಆಝಾನ್ ಕೂಗಿ, ಕೂಗಬೇಡಿ ಎಂದಿಲ್ಲ. ವ್ಯಾಪಾರ ಮಾಡಿ, ಮಾಡಬೇಡಿ ಅಂದಿಲ್ಲ. ನಮ್ಮದು ಹಿಜಬ್ ಪರ ಹೋರಾಟವಷ್ಟೆ ಎಂದು ಸ್ಪಷ್ಟಪಡಿಸಿದರು.

ನಾವು ನಮ್ಮ ಹಿಜಬ್ ಹಕ್ಕನ್ನು ಕೇಳಿದ್ದೇ ತಪ್ಪು ಅನ್ನೋ ರೀತಿ ನಮ್ಮನ್ನ ದೂಷಿಸುತ್ತಿದ್ದಾರೆ. ಆದರೆ ಹಿಜಬ್ನಿಂದ ನಮ್ಮ ಮುಖ, ಕೂದಲಷ್ಟೇ ಮುಚ್ಚೋದು, ನಮ್ಮ ಮಿದುಳನ್ನಲ್ಲ.

ಹಿಜಬ್ ಹಾಕಿದಾಗ ನಮ್ಮ ಕೂದಲು, ಮುಖ ಅಷ್ಟೇ ಕವರ್ ಆಗುತ್ತದೆ. ಶಿಕ್ಷಿತರು ಇದನ್ನು ಅರ್ಥ ಮಾಡಿಕೊಳ್ಳಬೇಕು. ನಾವು ವಿದ್ಯಾರ್ಥಿಗಳು, ನಮ್ಮನ್ನು ಈ ರೀತಿ ನೋಯಿಸಬೇಡಿ ಎಂದು ಮನವಿ ಮಾಡಿಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ