ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರಕ್ಕೆ ವಿರೋಧ: ಕೆ.ಎಸ್.ಈಶ್ವರಪ್ಪ

ಶುಕ್ರವಾರ, 1 ಜುಲೈ 2016 (14:42 IST)
ಪದಾಧಿಕಾರಿಗಳ ನೇಮಕ ಕುರಿತಂತೆ ಕೋರ್ ಕಮಿಟಿಗೆ ಮಾಹಿತಿ ನೀಡಬೇಕಾಗಿತ್ತು.ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರಕ್ಕೆ ನಮ್ಮ ವಿರೋಧವಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
 
ಪದಾಧಿಕಾರಿಗಳ ನೇಮಕ ಕುರಿತಂತೆ ಕೋರ್ ಕಮಿಟಿಗೆ ಮಾಹಿತಿ ನೀಡಬೇಕು.ಆದರೆ, ಕೋರ್ ಕಮಿಟಿ ಗಮನಕ್ಕೆ ತಾರದೇ ನೇಮಕಾತಿ ಮಾಡಿರುವುದು ಸರಿಯಲ್ಲ. ನಮ್ಮ ಪಕ್ಷ ಶಿಸ್ತು ಮತ್ತು ಸಂಘಟನೆಗೆ ಹೆಸರುವಾಸಿಯಾದ ಪಕ್ಷ. ಶಿಸ್ತು ಮತ್ತು ಸಂಘಟನಾತ್ಮಕ ಪಕ್ಷ ಕಟ್ಟಬೇಕು ಎನ್ನುವುದೇ ನಮ್ಮ ಸಿದ್ದಾಂತವಾಗಿದೆ ಎಂದು ತಿಳಿಸಿದ್ದಾರೆ.
 
ನಮಗೆ ಯಾರ ಮೇಲೆ ದ್ವೇಷವೂ ಇಲ್ಲ ಪ್ರೀತಿಯೂ ಇಲ್ಲ. ಏಕಪಕ್ಷೀಯವಾಗಿ ಪದಾಧಿಕಾರಿಗಳನ್ನು ನೇಮಕ ಮಾಡಿರುವುದಕ್ಕೆ ನಮ್ಮ ಸ್ಪಷ್ಟ ವಿರೋಧವಿದೆ ಎಂದು ಹೇಳಿದ್ದಾರೆ.
 
ಪದಾಧಿಕಾರಿಗಳ ನೇಮಕದ ಬಗ್ಗೆ ದೆಹಲಿ ವರಿಷ್ಠರು ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೆಹಲಿಗೆ ತೆರಳಿ ರಾಜ್ಯ ಬಿಜೆಪಿಯಲ್ಲಿ ಎದುರಾಗಿರುವ ಗೊಂದಲಗಳಿಗೆ ತೆರೆ ಎಳೆಯುವುದಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ