ಲಾಕ್ಡೌನ್ ಮಾಡಿದ್ರೆ ಹಸಿವಿನಿಂದಲೇ ಸಾಯುತ್ತೇವೆ! ಜನರ ಕೂಗು
ಬುಧವಾರ, 12 ಜನವರಿ 2022 (08:56 IST)
ಬೆಳಗಾವಿ : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಕೊರೊನಾ ಮೂರನೇ ಅಲೆ ನಿಯಂತ್ರಿಸಲು ತಜ್ಞರು ಈ ಹಿಂದೆ ಲಾಕ್ಡೌನ್ ಅನಿವಾರ್ಯ ಎಂದಿದ್ದಾರೆ. ಹೀಗೆ ಕೊರೊನಾ ಹೆಚ್ಚಾಗುತ್ತಿದ್ದರೆ ಸರ್ಕಾರ ಕೂಡಾ ಲಾಕ್ಡೌನ್ ಬಗ್ಗೆ ಚಿಂತನೆ ನಡೆಸುತ್ತಿದೆ.
ಲಾಕ್ಡೌನ್ ಜಾರಿಯಾದರೆ ಇಡೀ ಕರ್ನಾಟಕ ಆರ್ಥಿಕ ಪರಿಸ್ಥಿತಿಯಲ್ಲಿ ಸಿಲುಕುತ್ತದೆ. ಈ ಬಗ್ಗೆ ಮಾತನಾಡಿದ ಬೆಳಗಾವಿಯ ಹೂ ವ್ಯಾಪಾರಿ, ಲಾಕ್ಡೌನ್ ಮಾಡಿದ್ರೆ ಕೊರೊನಾ ಬಂದು ಸಾಯುವುದಕ್ಕಿಂತ, ಹಸಿವಿನಿಂದ ಸಾಯುವ ಪರಿಸ್ಥಿತಿ ಬರುತ್ತದೆ ಅಂತ ಹೇಳಿದರು.
ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಹೂವಿನ ವ್ಯಾಪಾರಿ, ವರ್ಷಕ್ಕೊಮ್ಮೆ ಲಾಕ್ಡೌನ್ ಮಾಡುತ್ತಾರೆ. ಸಾಲ ಮಾಡಿ ವ್ಯಾಪಾರ ಮಾಡುತ್ತಿದ್ದೇವೆ. ಈಗ ಮತ್ತೆ ಲಾಕ್ಡೌನ್ ಮಾಡಿದ್ರೆ ನಮ್ಮ ಇಡೀ ಕುಟುಂಬ ಬೀದಿಗೆ ಬೀಳುತ್ತೆ.
ಸಾಕಷ್ಟು ಹೂವಿನ ವ್ಯಾಪಾರಿಗಳು ವ್ಯಾಪಾರ ಬಿಟ್ಟು ಈಗಾಗಲೇ ಕೂಲಿ ಮಾಡುತ್ತಿದ್ದಾರೆ. ದಯವಿಟ್ಟು ಲಾಕ್ಡೌನ್ ಮಾಡಬೇಡಿ ಅಂತಾ ಸರ್ಕಾರಕ್ಕೆ ಮನವಿ ಮಾಡಿದರು.